Advertisement
ಕಳೆದ ವಾರ ಇಮ್ರಾನ್ ಬಂಧನದ ಬೆನ್ನಲ್ಲೇ ನಡೆದ ಹಿಂಸಾಚಾರದ ವೇಳೆ ಸೇನಾಧಿಕಾರಿಗಳ ಮನೆ ಮೇಲಿನ ದಾಳಿ ಪ್ರಕರಣ ಸಂಬಂಧ ಲಾಹೋರ್ ಹೈಕೋರ್ಟ್‌ಗೆ ಹಾಜರಾಗುವ ಮುನ್ನ ಖಾನ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈಗ ಲಂಡನ್‌ನ ಸಂಪೂರ್ಣ ಪ್ಲ್ರಾನ್ ಹೊರಬಿದ್ದಿದೆ. ನಾನು ಜೈಲಿನಲ್ಲಿರುವಂತೆಯೇ, ಹಿಂಸಾಚಾರದ ಹೆಸರಲ್ಲಿ
Related Articles
Advertisement
ಪತ್ನಿಗೆ ಜಾಮೀನು: ಈ ಎಲ್ಲ ಬೆಳವಣಿಗೆಗಳ ನಡುವೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳವಾರ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿಕೊಂಡಿದೆ. ಜತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಮಾ.23ರ ವರೆಗೆ ಜಾಮೀನು ಸಿಕ್ಕಿದೆ.
ಸುಪ್ರೀಂ ಕೋರ್ಟ್ ಎದುರು ಹೈಡ್ರಾಮಾಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರವಾಗಿ ಸುಪ್ರೀಂ ಕೋರ್ಟ್ ನಿಲುವು ಹೊಂದಿದೆ ಎಂದು ಆರೋಪಿಸಿ ಪಾಕಿಸ್ಥಾನದ ಆಡಳಿತ ಮೈತ್ರಿಕೂಟ ಪಾಕಿಸ್ಥಾನ ಡೆಮಾಕ್ರಾಟಿಕ್ ಮೂವ್‌ಮೆಂಟ್ (ಪಿಡಿಎಂ)ನ ಪಕ್ಷಗಳ ನಾಯಕರು ಮತ್ತು ಸದಸ್ಯರು ಸುಪ್ರೀಂ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಗಿ ಬಂದೋಬಸ್ತ್ ನಡುವೆಯೂ ಕೂಡ ಮೈತ್ರಿಕೂಟ ಪಕ್ಷಗಳ ಕೆಲವು ಕಿಡಿಗೇಡಿ ಸದಸ್ಯರು ಗೇಟುಗಳನ್ನು ಏರಿ ಆವರಣ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ. ಇದಲ್ಲದೆ ಪಾಕಿಸ್ಥಾನದ ಸಂಸತ್ ನ್ಯಾಶನಲ್ ಅಸೆಂಬ್ಲಿಯಲ್ಲಿ ಕೂಡ ಸುಪ್ರೀಂ ಕೋರ್ಟ್ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಇಮ್ರಾನ್ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ನ್ಯಾಯಮೂರ್ತಿಗಳಿಗೆ ಮಾಜಿ ಪ್ರಧಾನಿ ಬಗ್ಗೆ ಅಕ್ಕರೆ ಇದ್ದರೆ ಅವರ ಪಕ್ಷ ಸೇರಿಕೊಳ್ಳಲಿ. ರಾಷ್ಟ್ರವೇ ಖಾನ್ ಅವರ ಪಕ್ಷದವರ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ.
-ರಾಜಾ ರಿಯಾಜ್ ಅಹ್ಮದ್ ಖಾನ್, ಪಾಕ್‌ನ ಮುಖಂಡ