ಇಸ್ಲಾಮಾಬಾದ್ : ‘ನಾನು ಬದುಕಿನಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇನೆ; ಆದರೆ ಅವುಗಳಲ್ಲಿ ಅತೀ ದೊಡ್ಡ ಪ್ರಮಾದವೆಂದರೆ ರೆಹಾಮ್ ಜತೆಗಿನ ನನ್ನ ಎರಡನೇ ಮದುವೆ’ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ಥಾನ್ ತೆಹರೀಕ್ ಎ ಇನ್‌ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಬರೆದಿದ್ದ ತನ್ನ ಹೆಸರಿನ ಶೀರ್ಷಿಕೆಯುಳ್ಳ ಪುಸ್ತಕ ಈಗ ಪಾಕಿಸ್ಥಾನದಲ್ಲಿ ಮಾತ್ರವಲ್ಲ; ವಿದೇಶಗಳಲ್ಲೂ ಭಾರೀ ಸುದ್ದಿ ಮಾಡಿದೆ. ಇಮ್ರಾನ್ ಖಾನ್ ಒಬ್ಬ ಲಂಪಟ, ಪತ್ನಿ ಹಿಂಸಕ, ದ್ವಿಲಿಂಗ ಕಾಮಿ, ಡ್ರಗ್ ಅಡಿಕ್ಟ್, ಆನೇಕ ಭಾರತೀಯ ಮಹಿಳೆಯರಿಗೆ ಹುಟ್ಟಿರುವ (ಕನಿಷ್ಠ ಐದು) ಮಕ್ಕಳ ಅಪ್ಪ ಎಂದೆಲ್ಲ ರೆಹಾಮ್ ತನ್ನ ಪುಸ್ತಕರದಲ್ಲಿ ಇಮ್ರಾನ್ ಖಾನ್ ಲೀಲೆಯನ್ನು ರಸವತ್ತಾಗಿ ವರ್ಣಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಾಕ್ ಚುನಾವಣೆ ಈಗ ಸನ್ನಿಹಿತವಾಗಿರುವಾಗಲೇ ಬಿಡುಗಡೆಯಾಗಿರುವ ಇಮ್ರಾನ್ ಮಾಜಿ ಪತ್ನಿ, ಬ್ರಿಟಿಷ್ ಪತ್ರಕರ್ತೆ, ರೆಹಾಮ್ ಬರೆದಿರುವ ಈ ಪುಸ್ತಕಲ್ಲಿನ ಇಮ್ರಾನ್ ಕುರಿತ ವಿಷಯಗಳೆಲ್ಲ “ಮಹಾ ಸುಳ್ಳುಗಳ ಕಂತೆ’ ಎಂದು ಇಮ್ರಾನ್ ರಾಜಕೀಯ ಪಕ್ಷದವರು ಬೊಬ್ಬಿಟ್ಟಿದ್ದಾರೆ. ರಾಜಕೀಯ ಅಸ್ಥಿರತೆಯಿಂದ ನಲುಗುತ್ತಿರುವ ಪಾಕಿಸ್ಥಾನದಲ್ಲೀಗ ರೆಹಾಮ್ ಪುಸ್ತಕ ಮಹಾ ಸಂಚಲನ ಉಂಟುಮಾಡಿದೆ.
“ನನ್ನ ಖಾಸಗಿ ಬದುಕನ್ನು ನಾನು ಎಂದೂ ಬಹಿರಂಗಗೊಳಿಸಿದ್ದಿಲ್ಲ; ಅದನ್ನು ಸಾಕಷ್ಟು ಜಾಗ್ರತೆಯಿಂದ ಮುಚ್ಚಿದ ಪುಸ್ತಕವಾಗಿ ಇಟ್ಟುಕೊಂಡಿದ್ದೇನೆ; ಹಾಗೆಯೇ ರೆಹಾಮ್ ಬಗ್ಗೆಯೂ ನಾನು ಎಂದೂ ಏನನ್ನೂ ಬಹಿರಂಗವಾಗಿ ಹೇಳಿಲ್ಲ’ ಎಂದು ಇಮ್ರಾನ್ ಹೇಳಿದ್ದಾರೆ.
ಕೇವಲ ಹತ್ತು ತಿಂಗಳಿಗೇ ಮುಗಿದ ಹೋದ ತನ್ನ ಎರಡನೇ ವಿವಾಹದ ಬಗ್ಗೆ ಮತ್ತು ರೆಹಾಮ್ ಬಗ್ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ : ಮದುವೆ ಆಗುವ ವರೆಗೂ ನಾನು ಆಕೆಯ ಮುಖವನ್ನೇ ಕಂಡಿರಲಿಲ್ಲ. ಪೂರ್ತಿ ಮುಖ ಪರದೆ ಹಾಕಿಕೊಳ್ಳುತ್ತಿದ್ದ ಆಕೆಯನ್ನು ನಾನು ಮದುವೆಗೆ ಮೊದಲು ಮುಖ ಪರದೆ ಇಲ್ಲದ ಆಕೆಯನ್ನು ಎಂದೂ ನೋಡಿಯೇ ಇರಲಿಲ್ಲ; ಅಂತೆಯೇ ನಾನು ಆಕೆಯನ್ನು ವಿವಾಹಕ್ಕೆ ಪ್ರಪೋಸ್ ಮಾಡಿದೆ. ಆಕೆ ಇಸ್ಲಾಮಿನ ಸೂಫಿ ಪಂಥದ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದಳು. ಮದುವೆಯ ಬಳಿಕವೇ ಆಕೆಯ ಮುಖವನ್ನು ನೋಡಿದ ನನಗೆ ನಿರಾಶೆಯಾಗಿರಲಿಲ್ಲ.
ರೆಹಾಮ್ ಪುಸ್ತಕ ಉಂಟು ಮಾಡಿರುವ ರಾಜಕೀಯ ಅಲ್ಲೋಲ ಕಲ್ಲೋಲದ ಹೊರತಾಗಿಯೂ ಈ ಬಾರಿಯ ಪಾಕ್ ಮಹಾಚುನಾವಣೆಯನ್ನು ಬಹುಮತದೊಂದಿಗೆ ಗೆದ್ದು ಬರುವ ವಿಶ್ವಾಸವನ್ನು ಇಮ್ರಾನ್ ಖಾನ್ ವ್ಯಕ್ತಪಡಿಸಿದ್ದಾರೆ.