Advertisement

ಬಹಿರಂಗ ಮತದಾನ: ಪಾಕ್‌ ಚುನಾವಣಾ ಆಯೋಗದಲ್ಲಿ ಇಮ್ರಾನ್‌ ಕ್ಷಮೆಯಾಚನೆ

05:02 PM Aug 10, 2018 | Team Udayavani |

ಇಸ್ಲಾಮಾಬಾದ್‌ : ಪಾಕ್‌ ಪ್ರಧಾನಿಯಾಗಲು ಕಾಯುತ್ತಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರಿಂದು ತಾನು ಮತದಾನದ ವೇಳೆ ಎಸಗಿದ್ದ ಮತ ಪತ್ರ ರಹಸ್ಯ ಉಲ್ಲಂಘನೆಗೆ ನಿಶ್ಶರ್ತ  ಕ್ಷಮೆ ಕೋರಿ ಚುನಾವಣಾ ಆಯೋಗಕ್ಕೆ ತಮ್ಮ ಲಿಖೀತ ಕ್ಷಮೆಯಾಚನೆ ಪತ್ರವನ್ನು ಸಲ್ಲಿಸಿದರು. 

Advertisement

ಈ ಮೂಲಕ ಇಮ್ರಾನ್‌ ಖಾನ್‌ ಅವರ ಮುಂದಿನ ವಾರ ನಡೆಯಲಿದ್ದ ಪ್ರಮಾಣ ವಚನ ಸ್ವೀಕಾರಕ್ಕೆ ಇದ್ದ ಕೊನೆಯ ತೊಡಕು ನಿವಾರಣೆ ಆದಂತಾಗಿದೆ.

ಪಾಕ್‌ ಚುನಾವಣಾ ಆಯೋಗ 3-1 ಮತಗಳ ಅಂತರದಲ್ಲಿ ಇಮ್ರಾನ್‌ ಖಾನ್‌ ಕ್ಷಮೆಯಾಚನೆಯನ್ನು ಸ್ವೀಕರಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next