Advertisement

ಇಮ್ರಾನ್‌ ಖಾನ್‌ 3ನೇ ಮದುವೆ; ಈಗ ಅಧಿಕೃತ

06:45 AM Feb 20, 2018 | Team Udayavani |

ಲಾಹೋರ್‌: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರೀಕ್‌-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌, ಮೂರನೇ ಮದುವೆಯಾಗಿರುವುದಾಗಿ ಪಕ್ಷದ ವಕ್ತಾರ ಫ‌ವಾದ್‌ ಚೌಧರಿ ತಿಳಿಸಿದ್ದಾರೆ. 

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ತಮ್ಮ ಧಾರ್ಮಿಕ ಮಾರ್ಗದರ್ಶಕಿ ಬುಶ್ರಾ ಮನೇಕಾ ಅವರನ್ನು ಖಾನ್‌ ವರಿಸಿದ್ದು, ಪಠಾಣ್‌ನಲ್ಲಿರುವ ಬುಶಾì ಅವರ ಸಹೋದರರೊಬ್ಬರ ಮನೆಯಲ್ಲಿ ಭಾನುವಾರ ವಿವಾಹ  ನೆರವೇರಿದೆ. ಪಿಟಿಐನ ಕಾರ್ಯಕಾರಿಣಿ ಸದಸ್ಯ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು “ನಿಖಾಹ್‌’ ನೆರವೇರಿಸಿದ್ದಾರೆ. ಆರತಕ್ಷತೆ (ವಲಿಮಾ) ಸಮಾರಂಭವನ್ನೂ ಸರಳವಾಗಿ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಿಟಿಐ ಪಕ್ಷದ ಈ ಅಧಿಕೃತ ಪ್ರಕಟಣೆ, ಕೆಲ ದಿನಗಳಿಂದ ಖಾನ್‌ ಮೂರನೇ ಮದುವೆ ಬಗ್ಗೆ ಹರಡಿದ್ದ ಅಂತೆ ಕಂತೆಗಳಿಗೆ ಅಧಿಕೃತ ಮೊಹರು ಒತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next