Advertisement
ಅಕಾಲಿಕ ಮರಣಸ್ಟೇಟ್ ಆಫ್ ಗ್ಲೋಬಲ್ ಏರ್ 2020 (ಎಸ್‌ಒಜಿಎ 2020) ಅಧ್ಯಯನ ಪ್ರಕಾರ ಭಾರತದಲ್ಲಿ ಅಕಾಲಿಕ ಮರಣ ಹಾಗೂ ತಿಂಗಳು ತುಂಬದ ಹಸುಗೂಸುಗಳ ಸಾವಿಗೂ ವಾಯುಮಾಲಿನ್ಯವೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಈ ಕುರಿತು ಇಂಡಿಯಾ ಸ್ಪೇಂಡ್ ವರದಿ ಮಾಡಿದ್ದು, ಎಸ್‌ಒಜಿಎ 2020 ಅಧ್ಯಯನದ ಪ್ರಮುಖಾಂಶಗಳ ಮಾಹಿತಿಯನ್ನು ಹಂಚಿಕೊಂಡಿದೆ.
ಜಾಗತಿಕವಾಗಿ 2019ರಲ್ಲಿ ವಾಯುಮಾಲಿನ್ಯದಿಂದ 66.7ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಇದು ಒಟ್ಟು ಜಾಗತಿಕ ಸಾವಿನ ಪ್ರಮಾಣದ ಶೇ.12ರಷ್ಟಿದೆ. ಅಕಾಲಿಕ ಮರಣಕ್ಕೆ ದಾರಿ
ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿರುವ 87 ಅಂಶಗಳನ್ನು ಗುರುತಿಸಲಾಗಿದೆ. ಆ ಪೈಕಿ ವಾಯುಮಾಲಿನ್ಯ ಅಗ್ರ ನಾಲ್ಕನೇ ಸ್ಥಾನದಲ್ಲಿದ್ದು, ಅನಂತರದ ಸ್ಥಾನದಲ್ಲಿ ರಕ್ತದೊತ್ತಡ, ತಂಬಾಕು ಸೇವನೆ ಇದೆ. ಆದರೆ ಭಾರತದಲ್ಲಿ ಮಾತ್ರ ಅಕಾಲಿಕ ಮರಣಕ್ಕೆ ವಾಯುಮಾಲಿನ್ಯವೇ ಪ್ರಮುಖ ಕಾರಣ.
Related Articles
2010ರಿಂದ ಪ್ರತಿವರ್ಷ 2.5 ಪಾಟಿಕಲ್ಸ್ ಮ್ಯಾಟರ್ (ಪಿಎಂ) ಮಾಲಿನ್ಯ ಕಣದ ಪ್ರಮಾಣ ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಪಿಎಂ ಮಾಲಿನ್ಯ ಕಣಗಳ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಕನಿಷ್ಠ ಸುರಕ್ಷಿತ ಮಾನದಂಡ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚಿದೆ.
Advertisement
ಮನೆಯ ಒಳಗೂ ವಾಯುಮಾಲಿನ್ಯ2019ರಲ್ಲಿ ಮನೆಯ ಒಳಗಿನ ವಾಯುಮಾಲಿನ್ಯದಿಂದಾಗಿ ಸುಮಾರು 6 ಲಕ್ಷ ಭಾರತೀಯರು ಸಾವನ್ನಪ್ಪಿದ್ದರೆ, ಜಾಗತಿಕವಾಗಿ 2.31 ದಶಲಕ್ಷ ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ 16.7 ಲಕ್ಷ ಹಸುಗೂಸುಗಳ ಸಾವು
ಎಂದು ಎಸ್‌ಒಜಿಎ 2020 ವರದಿ ಪ್ರಕಾರ, 2019ರಲ್ಲಿ ಮನೆಯಿಂದ ಹೊರಗೆ ಮತ್ತು ಒಳಗೆ ಇರುವ ಪಾಟಿಕಲ್ಸ್ ಮ್ಯಾಟರ್ ಮಾಲಿನ್ಯವೇ ಭಾರತದಲ್ಲಿ ಸುಮಾರು 1,16,000 ಹಸುಗೂಸುಗಳ ಸಾವಿಗೆ ಕಾರಣವಾಗಿದೆ. ಅಲ್ಲದೆ ವಾರ್ಷಿಕ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಮೊದಲಾದ ಕಾಯಲೆಗಳಿಂದ 16.7 ಲಕ್ಷ ಸಾವಿಗೂ ವಾಯುಮಾಲಿನ್ಯವೇ ಕಾರಣ.