Advertisement
ವಿವಿಧ ಕಂಪೆನಿಗಳು ಸೋಂಕು ವ್ಯಾಪಿಸುವುದಕ್ಕೆ ಮೊದಲು ಇದ್ದ ವೇತನ ಪುನಃಸ್ಥಾಪಿಸಿವೆ. ಟಾಟಾ ಗ್ರೂಪ್‌ನ ವೋಲ್ಟಾಸ್, ವಿಜಯ ಸೇಲ್ಸ್ ದೀಪಾವಳಿಗೆ ಬೋನಸ್ ನೀಡಲೂ ನಿರ್ಧರಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳಿಗೆ ವೇರಿಯೇಬಲ್ ಪೇ (ಸಾಧನೆ ಆಧಾರಿತ ನಗದು ಪುರಸ್ಕಾರ) ನೀಡಿದೆ. ಅದರಲ್ಲಿ ಶೇ. 30ರಷ್ಟನ್ನು ಮುಂಚಿತವಾಗಿಯೇ ನೀಡುವು ದಾಗಿ ಪ್ರಕಟಿಸಿದೆ.ಅ. 1ರಿಂದ ಅನ್ವಯವಾಗುವಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಉದ್ಯೋಗಿಗಳ ವೇತನ ಕಡಿತವನ್ನು ವಾಪಸ್ ಪಡೆದುಕೊಂಡಿವೆ. ಬ್ಯಾಂಕ್‌ನಲ್ಲಿ ವಾರ್ಷಿಕವಾಗಿ 25 ಲಕ್ಷ ರೂ. ವೇತನ ಪಡೆಯುತ್ತಿರುವ ಹಿರಿಯ ದರ್ಜೆ ಅಧಿಕಾರಿಗಳಿಗೆ ಮಾತ್ರ ವೇತನ ಕಡಿತದ ಅನುಭವವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್‌ನ ಅಧ್ಯಕ್ಷ ಮತ್ತು ಮುಖ್ಯ ಮಾನವ ಸಂಪದ ಅಧಿಕಾರಿ ಸುಖ್‌ಜಿತ್ ಪಸ್ರಿಚಾ “ದೇಶದಲ್ಲಿ ನಿಧಾನಕ್ಕೆ ಅನ್‌ಲಾಕ್ ಪ್ರಕ್ರಿಯೆಗಳು ಆರಂಭವಾಗುತ್ತಿವೆ. ಅದೇ ರೀತಿ ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಉದ್ಯೋಗಿಗಳಿಗೆ ವೇತನ ಪುನಃಸ್ಥಾಪಿಸುವ ಪ್ರಕ್ರಿಯೆ ನಡೆಸಿದೆ. ವಾರ್ಷಿಕ 25 ಲಕ್ಷ ರೂ.ಗಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ವೇತನ ಕಡಿತವಾಗಿಲ್ಲ’ ಎಂದರು.