Advertisement
ಸಣ್ಣ ಮೂರ್ತಿಗಳ ವಿಸರ್ಜನೆಗಾಗಿ ವಲಯದ ಪ್ರಮುಖ ಜಂಕ್ಷನ್‌ಗಳು, ಪ್ರಮುಖ ದೇವಾಲಯಗಳು ಸೇರಿದಂತೆ 282 ಸ್ಥಳಗಳಲ್ಲಿ ಪಾಲಿಕೆಯಿಂದ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 32 ಮೊಬೈಲ್ ಟ್ಯಾಂಕರ್‌ಗಳ ಇರಿಸಲು ಉದ್ದೇಶಿಸಿದ್ದು, 63 ಕಡೆಗಳಲ್ಲಿ ತಾತ್ಕಾಲಿಕ ಟ್ಯಾಂಕರ್ ಸ್ಥಾಪಿಸಲು ಪಾಲಿಕೆ ಮುಂದಾಗಿದೆ.
Related Articles
Advertisement
ಸಿಡಿಮದ್ದು ನಿಷೇಧ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಿಡಿಮದ್ದು, ಪಟಾಕಿಗಳನ್ನು ಸಿಡಿಸುವುದು ಹಾಗೂ ಧ್ವನಿ ವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ ರಾತ್ರಿ 11 ಗಂಟೆಯ ಬಳಿಕ ಮೂರ್ತಿಗಳ ವಿಸರ್ಜನೆಗೆ ಅವಕಾಶವಿರುವುದಿಲ್ಲ.
ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ದೊರೆಯುವುದೆಲ್ಲಿ? ಪೂರ್ವ ವಲಯ: ದೊಮ್ಮಲೂರು, ಶಿವಾಜಿನಗರ, ಶಾಂತಿನಗರ, ಜೆಪಿ ನಗರ, ವಸಂತ ನಗರ, ಸಿ ವಿ ರಾಮನ್ ನಗರ, ಮಾರುತಿ ಸೇವಾನಗರ, ಕೆಜಿ ಹಳ್ಳಿ, ಪುಲಿಕೇಶಿನಗರ, ಜೆಸಿ ನಗರ, ಹೆಬ್ಟಾಳ ಹಾಗೂ ಎಚ್‌ಬಿಆರ್ ಬಡಾವಣೆ. ಪಶ್ಚಿಮ ವಲಯ: ಗೋವಿಂದರಾಜನಗರ, ಮಲ್ಲೇಶ್ವರ, ನಾಗಾಪುರ, ಚಂದ್ರಾ ಬಡಾವಣೆ, ರಾಜಾಜಿನಗರ, ಶ್ರಿರಾಮಮಂದಿರ, ಗಾಂಧಿನಗರ, ಮಹಾಲಕ್ಷ್ಮೀಪುರ, ಕಾಟನ್‌ಪೇಟೆ, ಮತ್ತಿಕೆರೆ, ಜಗಜೀವನರಾಮನಗರ ಹಾಗೂ ಚಾಮರಾಜಪೇಟೆ. ದಕ್ಷಿಣ ವಲಯ: ವಿಜಯನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಗಿರಿನಗರ, ಪದ್ಮನಾಭನಗರ, ಬನಶಂಕರಿ, ಜಯನಗರ, ಕೆಂಪೇಗೌಡನಗರ, ಬಿಟಿಎಂ ಬಡಾವಣೆ, ಹೊಂಬೇಗೌಡ ನಗರ, ಕೋರಮಂಗಲ ಹಾಗೂ ಜೆಪಿ ನಗರ. ಬೊಮ್ಮನಹಳ್ಳಿ ವಲಯ: ಅಂಜನಪುರ, ಬೊಮ್ಮನಹಳ್ಳಿ, ಉತ್ತರಹಳ್ಳಿ, ಬೇಗೂರು, ಅರಕೆರೆ, ಎಚ್‌ಎಸ್‌ಆರ್ ಬಡಾವಣೆ. ಮಹದೇವಪುರ ವಲಯ: ಹೂಡಿ, ವೈಟ್‌ಫೀಲ್ಡ್, ಮಾರತಹಳ್ಳಿ, ಕೆಆರ್‌ಪುರ, ಎಚ್‌ಎಎಲ್ ಹಾಗೂ ಹೊರಮಾವು. ದಾಸರಹಳ್ಳಿ ವಲಯ: ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯಾ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ. ಆರ್‌ಆರ್‌ನಗರ ವಲಯ: ಆರ್‌ಆರ್ ನಗರ, ಲಗ್ಗೆರೆ, ಗೊರಗುಂಟೆಪಾಳ್ಯ, ಯಶವಂತಪುರ, ಕೆಂಗೇರಿ ಹೇರೋಹಳ್ಳಿ. ಯಲಹಂಕ ವಲಯ: ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ಉಪನಗರ, ಯಲಹಂಕ ಹಾಗೂ ಬ್ಯಾಟರಾಯಪುರ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗಳಲ್ಲಿ ಅನುಮತಿ ಪಡೆಯಬಹುದಾಗಿದೆ.