Advertisement

Cheetah: ದಪ್ಪ ತುಪ್ಪಳ ಬೆಳೆಸಿಕೊಳ್ಳದ ಚೀತಾ ಆಮದು

09:23 PM Sep 16, 2023 | Team Udayavani |

ನವದೆಹಲಿ: ನಮೀಬಿಯದ ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಂದು ಭಾನುವಾರಕ್ಕೆ ಸರಿಯಾಗಿ ಒಂದು ವರ್ಷವಾಗುತ್ತದೆ. ಅಲ್ಲಿಂದ ಬಂದ ಹಲವು ಚೀತಾಗಳು ಸಾವನ್ನಪ್ಪಿವೆ. ಇದರ ನಡುವೆಯೇ ಹೊಸತಾಗಿ ಚೀತಾಗಳನ್ನು ತರಿಸಿಕೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಯೋಜಿಸಿದೆ. ಈ ಬಾರಿ ಚಳಿಗಾಲದ ವೇಳೆ ದಪ್ಪ ತುಪ್ಪಳವನ್ನು ಬೆಳೆಸಿಕೊಳ್ಳದ ಚೀತಾಗಳನ್ನೇ ತರಿಸಿಕೊಳ್ಳಲಾಗುತ್ತದೆ! ಕಾರಣ ಇದುವರೆಗೆ ಸಾವನ್ನಪ್ಪಿರುವ ನಮೀಬಿಯ ಚೀತಾಗಳ ಪೈಕಿ ಮೂರು ದಪ್ಪ ತುಪ್ಪಳ ಬೆಳೆಸಿಕೊಂಡಿದ್ದರಿಂದಲೇ ಸಾವನ್ನಪ್ಪಿರುವುದು.

Advertisement

ಮುಂದಿನ ಬಾರಿ ದ.ಆಫ್ರಿಕಾದಿಂದ ತರಿಸಿಕೊಳ್ಳುವ ಚೀತಾಗಳನ್ನು ಮಧ್ಯಪ್ರದೇಶದ ಗಾಂಧಿಸಾಗರ ವನ್ಯಜೀವಿ ಧಾಮದಲ್ಲಿ ಬಿಡಲಾಗುತ್ತದೆ. ಕೆಲವನ್ನು ನೌರಾದೇಹಿಯಲ್ಲಿ ಬಿಡಲಾಗುತ್ತದೆ. ಕುನೋ ಪಾರ್ಕ್‌ನಲ್ಲಿ ಹೊಸ ಚೀತಾ ಬಿಡಲು ಅಗತ್ಯ ಜಾಗವಿಲ್ಲದಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.

ಸಾವಿಗೆ ಕಾರಣವೇನು?: ಆಫ್ರಿಕಾದ ಚಳಿಗಾಲವನ್ನು ಅನುಭವಿಸಿದ್ದ ನಮೀಬಿಯ ಚೀತಾಗಳು, ಭಾರತದಲ್ಲಿ ಬೇಸಿಗೆಯಿದ್ದರೂ ಆ ಸಮಯದಲ್ಲಿ ದಪ್ಪ ತುಪ್ಪಳವನ್ನು ಬೆಳೆಸಿಕೊಂಡಿದ್ದವು. ಎಂದಿನಂತೆ ಚಳಿಗಾಲದ ನಿರೀಕ್ಷೆಯಲ್ಲಿದ್ದ ಅವು ಇಲ್ಲಿ ದಪ್ಪಚರ್ಮ ಬೆಳೆಸಿಕೊಂಡಿದ್ದರಿಂದ, ತುರಿಕೆ ಶುರುವಾಯಿತು. ಅದರಿಂದ ತಮ್ಮ ಕತ್ತನ್ನು ಚೀತಾಗಳು, ಮರಕ್ಕೆ, ನೆಲಕ್ಕೆ ಎಲ್ಲೆಂದರಲ್ಲಿ ಉಜ್ಜತೊಡಗಿದವು. ಇದರಿಂದ ಸೋಂಕು ಉಂಟಾಗಿ ಅವು ಸಾವನ್ನಪ್ಪಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ನಿರ್ದೇಶಕ ಎಸ್‌.ಪಿ.ಯಾದವ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next