ನವದೆಹಲಿ: ಭದ್ರತಾ ದೃಷ್ಟಿಯಿಂದ ಸೊಸೆಯ ಆಭರಣವನ್ನು ಅತ್ತೆ ಎತ್ತಿಟ್ಟುಕೊಳ್ಳುವುದು, ಸ್ವತಂತ್ರವಾಗಿ ಬದುಕುತ್ತಿರುವ ಪುತ್ರನನ್ನು ನಿಯಂತ್ರಿಸಲು ವಿಫಲವಾಗುವುದು, ಹಾಗೆಯೇ ಪುತ್ರನ ಸಹೋದರನೊಂದಿಗೆ ಹೊಂದಿಕೊಂಡು ಹೋಗುವಂತೆ ಸೊಸೆಗೆ ಸಲಹೆ ನೀಡುವುದು ಕ್ರೌರ್ಯವಾಗುವುದಿಲ್ಲ.. ಐಪಿಸಿ 498 ಎ ವಿಧಿಯನ್ನು ಆಧರಿಸಿ ಹೀಗೊಂದು ಮಹತ್ವದ ತೀರ್ಪನ್ನು ಸರ್ವೋಚ್ಚ ಪೀಠ ನೀಡಿದೆ.
ಅನಗತ್ಯ ಹಗೆತನ ಬೆಳೆಸಿಕೊಳ್ಳುವ ಬದಲು ಪತಿಯ ಸಹೋದರನೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ, ಅತ್ತೆ ಸೊಸೆಗೆ ಸಲಹೆ ನೀಡಿದರೆ ಅದು ತಪ್ಪಲ್ಲ ಎಂದು ನ್ಯಾಯಪೀಠ ಖಚಿತವಾಗಿ ನುಡಿದಿದೆ. ಹಾಗೆಯೇ ಅತ್ತೆ ತನ್ನ ಆಭರಣಗಳನ್ನು ಎತ್ತಿಟ್ಟುಕೊಂಡಿದ್ದಾರೆ ಎಂದು ಸೊಸೆ ಆರೋಪಿಸಿದ್ದರೂ, ಅದಕ್ಕೆ ನಿಖರ ಆಧಾರ ನೀಡಿಲ್ಲ, ಕೇವಲ ಆರೋಪಗಳನ್ನು ಮಾತ್ರ ಮಾಡಲಾಗಿದೆ ಎಂದಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್‌ಗೀಗ ಒಂದೂವರೆ ಕೋಟಿ ಫಾಲೋವರ್ಸ್!
ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ವ್ಯಕ್ತಿಯೊಬ್ಬನನ್ನು ಇದೇ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೇಳಿತ್ತು. ಅದೇ ಕಾರಣಕ್ಕೆ ಭಾರತ ಬಿಟ್ಟು ತನ್ನ ಉದ್ಯೋಗಕ್ಷೇತ್ರವಾದ ಅಮೆರಿಕಕ್ಕೆ ತೆರಳಬಾರದೆಂದು ಆದೇಶಿಸಿತ್ತು. ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.