“ದೊಡ್ಮನೆ ಸೊಸೆ’ ಎನ್ನುವ ಚಿತ್ರವೊಂದು ಸಂಕ್ರಾಂತಿ ಹಬ್ಬದಂದು ಸೆಟ್ಟೇರಿತು.
ಪ್ರಚಾರದ ಪ್ರಥಮ ಹಂತವಾಗಿ ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರಾದ ಎಂ.ನರ ಸಿಂಹಲು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆಸ್ಕರ್ ಕೃಷ್ಣ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತೇಜ್ವಿನಯ್ .ಎಸ್ ಅವರು ಮಾನ್ಯ ಸಿನಿ ಕ್ರಿಯೇಶನ್ಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಪ್ರತಿ ಹೆಣ್ಣು
ಮಗಳು ಒಂದು ಮನೆಗೆ ಸೊಸೆಯಾಗಿ ಪ್ರವೇಶ ನೀಡುತ್ತಾಳೆ. ಆ ಮನೆಗೆ ಬರುವ ಸೊಸೆಯ ಅನುದಿನದ ವ್ಯಕ್ತಿತ್ವ ಮತ್ತು ನಡತೆಯು ಇಡೀ ಕುಟುಂಬದ ಗೌರವ ಹಾಗೂ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಆಕೆ ಕಟ್ಟಲೂಬಲ್ಲಳು, ಕೆಡವಲೂ ಬಲ್ಲಳು. ಇಂತಹ ಅಂಶಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ ಎನ್ನುವುದು ತಂಡದ ಮಾತು.
ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಿತೀಶ್.ವಿ ಸಂಗೀತ, ಮೈಸೂರು ಸೋಮು ಛಾಯಾಗ್ರಹಣ, ಕೌಶಿಕ್ ಕಿರಣ್ ಸಂಕಲನವಿದೆ.