Advertisement

Import : ಲ್ಯಾಪ್‌ಟಾಪ್‌ ಆಮದು- 110 ಅರ್ಜಿಗಳ ವಿಲೇವಾರಿ

08:49 PM Nov 01, 2023 | Pranav MS |

ನವದೆಹೆಲಿ: ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಹಾಗೂ ಐಟಿ ಹಾರ್ಡ್‌ವೇರ್‌ ಉತ್ಪನ್ನಗಳ ಆಮದಿಗೆ ಒಟ್ಟು 111 ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ 110 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಡೆಲ್‌ ಇಂಟರ್‌ನ್ಯಾಷನಲ್‌ ಸರ್ವೀಸಸ್‌ ಇಂಡಿಯಾ, ಆಪಲ್‌ ಇಂಡಿಯಾ, ಎಚ್‌ಪಿ ಇಂಡಿಯಾ ಸೇಲ್ಸ್‌ ಪ್ರೈ. ಲಿ., ಲೆನೊವಾ(ಇಂಡಿಯಾ), ಆಸಸ್‌ ಇಂಡಿಯಾ, ಐಬಿಎಂ ಇಂಡಿಯಾ, ಕ್ಸಿಯೋಮಿ ಟೆಕ್ನಾಲಜಿ ಇಂಡಿಯಾ, ಸಿಸ್ಕೊ ಕಾಮರ್ಸ್‌ ಇಂಡಿಯಾ, ಸೀಮನ್ಸ್‌ ಲಿ., ಬಾಶ್‌ ಲಿ. ಸೇರಿದಂತೆ 110 ಕಂಪನಿಗಳಿಗೆ ಐಟಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮತ್ತು ಐಟಿ ಹಾರ್ಡ್‌ವೇರ್‌ ಉತ್ಪನ್ನಗಳ ಆಮದಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next