Advertisement
ಅದರಂತೆ, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್‌ನ ನಾಗರಿಕರು 90 ದಿನಗಳ ಕಾಲ, ಇಲ್ಲಿನ ವಲಸಿಗರು 120 ದಿನಗಳ ಕಾಲ ಅಮೆರಿಕ ಪ್ರವೇಶಿಸುವಂತಿಲ್ಲ. ಆದರೆ, ಟ್ರಂಪ್ ಆಡಳಿತದ ಪರಿಷ್ಕೃತ ನೀತಿಯು ಹೊಸದಾಗಿ ವಿವಾದ ಹಾಗೂ ಕೋರ್ಟ್ ಹೋರಾಟಗಳಿಗೆ ನಾಂದಿ ಹಾಡುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ, ಅಮೆರಿಕಕ್ಕೆ ಯಾರೆಲ್ಲ ಭೇಟಿ ನೀಡಬಹುದು ಮತ್ತು ಯಾರು ಭೇಟಿ ನೀಡಬಾರದು ಎಂಬ ಹೊಸ ಮಾನದಂಡವನ್ನು ಸರ್ಕಾರವು ಘೋಷಿಸಿದೆ. ಅದರ ಪ್ರಕಾರ, ಅಮೆರಿಕದಲ್ಲಿ ಹತ್ತಿರದ ಸಂಬಂಧಿಕರಿದ್ದರೆ ಅಂಥವರನ್ನು ಭೇಟಿಯಾಗಲು ಅವಕಾಶವಿದೆ. ಆದರೆ, ಅಜ್ಜ-ಅಜ್ಜಿಯಂದಿರು, ಮೊಮ್ಮಕ್ಕಳು, ಅಂಕಲ್, ಆಂಟಿ, ಸೋದರ ಸಂಬಂಧಿಗಳು ಮತ್ತು ಭಾವೀ ಪತಿ, ಭಾವೀ ಪತ್ನಿ ಮುಂತಾದವರು ಅಮೆರಿಕದಲ್ಲಿನ ಸಂಬಂಧಿಗಳನ್ನು ನೋಡಲು ಬರುವಂತಿಲ್ಲ. ಸೊಸೆಯಂದಿರು, ಅಳಿಯಂ ದಿರು ಮತ್ತು ಮಲಮಕ್ಕಳಿಗೆ ಮಾತ್ರ ಪ್ರವೇಶಾ ವಕಾಶವಿರುತ್ತದೆ. ಸರ್ಕಾರದ ಈ ಪಟ್ಟಿಗೆ ನ್ಯಾಯವಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಧ್ಯಕ್ಷರಾದವರು ಕುಟುಂಬ ಗಳನ್ನು ಕೂಡಿಸುವ ಕೆಲಸ ಮಾಡಬೇಕೇ ಹೊರತು, ದೂರ ಮಾಡುವುದಲ್ಲ ಎಂದು ನ್ಯಾಷನಲ್ ಇರಾನಿಯನ್ ಅಮೆರಿಕನ್ ಕೌನ್ಸಿಲ್ ಹೇಳಿದೆ. Advertisement
ಟ್ರಂಪ್ ವಲಸೆ ನೀತಿ ಜಾರಿ; ಅಜ್ಜ-ಅಜ್ಜಿಗೂ ಇಲ್ಲ ಪ್ರವೇಶ
03:45 AM Jul 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.