Advertisement
ಧಾರ್ಮಿಕ ಕ್ಷೇತ್ರಗಳು ತನ್ನವೇ ಆದ ಮಹತ್ವದಿಂದ ಪ್ರಸಿದ್ಧಿ ಪಡೆಯುತ್ತವೆ. ಇಲ್ಲಿ ಸಂಪ್ರದಾಯ, ಅನುಷ್ಠಾನ, ಆಚರಣೆ ಇವುಗಳು ಕೂಡ ಅತಿ ಪ್ರಮುಖವಾಗಿದೆ ಇವುಗಳನ್ನು ನಾವು ಆಚರಣೆಗೆ ತರುವುದು ಮತ್ತು ರೂಢಿಯಲ್ಲಿರಿಸಿಕೊಳ್ಳುವುದು ಅಗತ್ಯ ವೆಂದು ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಬಾಯಾರು ಅವರು ನುಡಿದರು. ಅವರು ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪುನಃ ಪ್ರತಿಷ್ಠಾಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನಶೆಟ್ಟಿ ಕಜೆ, ಯು. ಶಂಕರ ಗಟ್ಟಿ ಹೊಸಮನೆ, ಕಲ್ಲಂಗಡಿ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಮಂಜುನಾಥ ರೈ ಕೋಟೆಕುಂಜ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೋಟೆಕುಂಜ ಪ್ರಬಾಕರ ಆಳ್ವ ಅವರು ಭಾಗವಹಿಸಿ ಮಾನತಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಜಿತ್ ಶೆಟ್ಟಿ ಕಜೆ ಸ್ವಾಗತಿಸಿ, ಜಗದೀಶ್ ಆಚಾರ್ಯ ಕಂಬಾರು ವಂದಿಸಿದರು. ರಾಮಚಂದ್ರ ಬೆದ್ರಡ್ಕ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ಹಾಗೂ ಶ್ರೀಜಾ ಪ್ರಾರ್ಥಿಸಿದರು.
ಮಾ. 7ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ವಿವಿಧ ತಂಡಗಳಿಂದ ಭಜನೆ. ಅಪರಾಹ್ನ ಜಗದೀಶ್ ಕೋರಿಕ್ಕಾರು ಅಗಲ್ಪಾಡಿ ಮತ್ತು ಬಳಗದವರಿಂದ ವಯಲಿನ್ ಸಂಗೀತ ಕಛೇರಿ, ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ ಸಂಗೀತ ವಿದ್ಯಾನಿಧಿ ಡಾ|
ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿಗಾನ ಸುಧಾ ಜರಗಿತು. ಮಾ. 8ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಶ್ರೀ ಶಕ್ತಿ ಭಜನಾ ಮಂದಿರ ಉಳಿಯತ್ತಡ್ಕ, ಶ್ರೀ ಧೂಮಾವತೀ ಭಜನಾ ಸಂಘ ಪುತ್ತೂರುಕೊಟ್ಯ, ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಸಂಘ ದೇಶಮಂಗಲ ಇವರಿಂದ ಭಜನೆ. ಅಪರಾಹ್ನ ಗಂಟೆ 2.30ಕ್ಕೆ ಸರಸ್ವತೀ ಸಂಗೀತ ವಿದ್ಯಾಲಯ ಜಯಭಾರತೀ ಪ್ರಕಾಶ ಕಾವು ಮಠ ಚೌಕಿ ಇವರ ಶಿಷ್ಯರಿಂದ ಸಂಗೀತಾರ್ಚನೆ, ಸಂಜೆ ಗಂಟೆ 7ರಿಂದ ಜರಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಮೊಕ್ತೇಸರ ಅನಂತ ವಿಷ್ಣು ಹೇರಳ ವಹಿಸುವರು.
Related Articles
Advertisement