Advertisement
ತಾಲೂಕಿನ ಗಡಿ ಗ್ರಾಮವಾದ ತಡೋಳಾ ಗ್ರಾಮದಲ್ಲಿ ಶನಿವಾರ ತಡೋಳಾ ಗ್ರಾಪಂನ ಶೇ. 100ರಷ್ಟು ಖಜೂರಿ ಶೇ. 10 ಮತ್ತು ನಿರಗುಡಿ ಗ್ರಾಪಂಗಳಿಗೆ ಸಂಬಂಧಿಸಿದಂತೆ ಶೇ. 25ರಷ್ಟು ಜಲಾನಯನ ಕಾಮಗಾರಿಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಯಿ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗರು ಮಾತನಾಡಿ, ಜಿಲ್ಲೆಯ ಆಳಂದ ಮತ್ತು ಜೇವರ್ಗಿ ತಾಲೂಕಿಗೆ ಮಾತ್ರ ಕೃಷಿ ಸಂಚಯಿ ಯೋಜನೆ ಮಂಜೂರಾಗಿದೆ. ಆಳಂದಕ್ಕೆ ಯೋಜನೆ ತರುವಲ್ಲಿ ಶಾಸಕರು ಅನೇಕ ಬಾರಿ ಸರ್ಕಾರದ ಮಟ್ಟದಲ್ಲಿ ಸಚಿವರ ಗಮನಕ್ಕೆ ತಂದು ಮಂಜೂರಾತಿಗೆ ಶ್ರಮಿಸಿದ್ದಾರೆ. ಇದು ಒಳ್ಳೆಯ ಕೆಲಸವಾಗಿದ್ದು, ಶೇ. 60ರಷ್ಟು ಜಲಾನಯನ ಕೆಲಸ ಮಾಡಿದರೆ ಇನ್ನೂ ಶೇ. 40ರಷ್ಟು ಆದಾಯ ಹೆಚ್ಚುತ್ತದೆ ಎಂದರು.
ಆಯ್ಕೆಯಾದ ಮೂರು ಗ್ರಾಪಂನ ಐದು ಹಳ್ಳಿಗೆ 5.50 ಸಾವಿರ ಹೆಕ್ಟೇರ್ ಗಾಗಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆಗಾಗಿ ವೈಜ್ಞಾನಿಕವಾಗಿ ಕಾಮಗಾರಿ ಆಗಲಿದೆ. ಇದರಲ್ಲಿ ಕಾಲವೆ, ಗೋಕಟ್ಟೆ, ಚೆಕ್ ಡ್ಯಾಂ ಮತ್ತು ಕೃಷಿ ಹೊಂಡ ನಿರ್ಮಾಣ ನಡೆಯಲಿದೆ. ಮೂರು ವರ್ಷದ ಯೋಜನೆಯಾಗಿದೆ ಎಂದರು.
ಜಿಲ್ಲೆಯ 92 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ನೀರಾವರಿ ಇದೆ. ಉಳಿದ 9.50 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಬೇಸಾಯ, ಮಳೆ ಬಂದರೆ ಮಾತ್ರ ಬೇಸಾಯವಿದೆ. ಇಂಥ ಪರಿಸ್ಥಿತಿ ಜಿಲ್ಲೆಯಲಿದೆ. ಬೇರೆ ಜಿಲ್ಲೆಗಳು ಗಮನಿಸಿದರೆ ಶೇ. 50ರಷ್ಟು ನೀರಾವರಿ ಇದೆ. ಬೆಳಗಾವಿಗೆ ಹೋದರೆ ಖರೀಪ್ ರಬ್ಬಿ ಬೇಸಿಗೆಯಲ್ಲೂ ಬೆಳೆ ತೆಗೆಯುತ್ತಾರೆ. ಅಲ್ಲಿ ಕಾಲುವೆಗಳಿರುವುದರಿಂದ ಇದು ಸಾಧ್ಯವಾಗುತ್ತಿದೆ. ಇಲ್ಲಿಯೂ ಆ ಮಾದರಿ ಅನುಸರಿಸಲು ನೆಲ, ಜಲದ ಕಾಮಗಾರಿ ಅರಣ್ಯವೃದ್ಧಿ, ಹೈನುಗಾರಿಕೆ, ರೈತ ಮಹಿಳಾ ಸಂಘಗಳ ಆರ್ಥಿಕ ವೃದ್ಧಿಯಂತ ಕಾರ್ಯಗಳು ಯೋಜನೆಯಲ್ಲಿ ಒಳಗೊಂಡಿವೆ ಎಂದರು.