Advertisement
ಪರಿಸರವಾದಿ ಕೆ.ಎನ್.ತ್ಯಾಗರಾಜು ನೀಡಿದ ಸಲಹೆ ಮೇರೆಗೆಕೋಲಾರ ತಾಲೂಕಿನ ನರಸಾಪುರ ಹಾಗೂ ಚೌಡದೇನಹಳ್ಳಿ ಕೆರೆಯಲ್ಲಿ ಏರಿಯೇಟರ್ ಅಳವಡಿಸುವ ಮೂಲಕ ಅಧಿಕಾರಿಗಳು ಪ್ರಾಯೋಗಿಕ ಅನುಷ್ಠಾನ ಮಾಡಿದ್ದಾರೆ. ಕೆರೆಯ ಮಧ್ಯ ಭಾಗದಲ್ಲಿ ನೀರು ಬುಗ್ಗೆಯಂತೆ ಚಿಮ್ಮುತ್ತಿರುವುದನ್ನು ಗಮನಿಸಿದ ಸಾರ್ವ ಜನಿಕರು ಇದು ಅಂತರ್ಜಲ ತುಂಬಿ ಉಕ್ಕುತ್ತಿರು ವುದು ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಖ್ಯಾನಿಸಿಕೊಂಡಿದ್ದರು. ಆದರೆ, ಇದು ಕೆ.ಸಿ. ವ್ಯಾಲಿ ನೀರನ್ನು ಶುದ್ಧೀಕರಿಸುವ ಭಾಗವಾಗಿ ಅಳವಡಿಸಿರುವ ಏರಿಯೇಟರ್‌ಗಳೆಂದು ತ್ಯಾಗರಾಜು ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಏನಿದು ಏರಿಯೇಟರ್ : ಒಳ ಚರಂಡಿ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದ್ದರೂ, ನೀರಿನ ಶುದ್ಧತೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಅನುಮಾನಗಳು ನಿವಾರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಕೆ.ಸಿ.ವ್ಯಾಲಿ ನೀರು ತುಂಬಿರುವ ಕೆರೆಗಳಲ್ಲಿ ಏರಿಯೇಟರ್‌ಗಳನ್ನು ಅಳವಡಿಸಿದರೆ ನೀರು ಗಾಳಿಯಲ್ಲಿ ಚಿಮ್ಮುವಂತೆ ಮಾಡಿ ನೀರಿಗೆ ಹೆಚ್ಚು ಆಮ್ಲಜನಕ ಸೇರುವಂತೆ ಮಾಡುವುದೇ ಏರಿಯೇಟರ್‌ನ ತಂತ್ರಜ್ಞಾನವಾಗಿದೆ. ಇದರಿಂದ ಗಡಸು ನೀರು ಮೆದು ನೀರಾಗಿ ಪರಿವರ್ತನೆ ಯಾಗುತ್ತದೆಯೆಂದು ಹೇಳಲಾಗುತ್ತಿದೆ.
ಉಪಯೋಗವೇನು? : ಕೆ.ಸಿ.ವ್ಯಾಲಿ ನೀರು ಕೋಲಾರ ಜಿಲ್ಲೆಯ 138 ಕೆರೆಗಳಿಗೂ ತುಂಬಲು ಯೋಜಿಸಲಾಗಿದ್ದು, ಈಗಾಗಲೇ 70 ಕೆರೆಗಳು ಕೋಡಿ ಹರಿಯುತ್ತಿವೆ. ಈ ಕೆರೆಗಳಲ್ಲಿಏರಿಯೇಟರ್‌ಗಳನ್ನು20ಎಕರೆಗೊಂದರಂತೆ ಅಳವಡಿಸಿದರೆ ನೀರು ಶುದ್ಧೀಕರಣವಾಗುತ್ತದೆ. ಹೆಚ್ಚು ಆಮ್ಲಜನಕ ನೀರಿಗೆ ಸೇರ್ಪಡೆಯಾಗುವುದರಿಂದ ಮೀನುಗಳ ವೃದ್ಧಿಗೂ ಸಹಕಾರಿಯಾಗುತ್ತದೆ. ನೀರಿನ ಗಡಸುತನವನ್ನು ಮೆದುವಾಗಿಸುತ್ತದೆ. ನೀರಲ್ಲಿ ಉಳಿದುಕೊಂಡಿರುವ ರಾಸಾಯನಿಕಗಳು ವಿಭಜನೆಗೊಳಪಟ್ಟು ಹಾನಿಯನ್ನು ಕಡಿಮೆ ಮಾಡುತ್ತದೆ.
ಕೆ.ಸಿ. ವ್ಯಾಲಿನೀರು ನಿಂತಿರುವ ನರಸಾಪುರ ಹಾಗೂ ಚೌಡದೇನಹಳ್ಳಿ ಕೆರೆಗಳಲ್ಲಿ ಪ್ರಾಯೋಗಿಕವಾಗಿ ಗಾಳಿಯಿಂದ ನೀರು ಶುದ್ಧೀಕರಿಸುವ ಏರಿಯೇಟರ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇದು ಎಲ್ಲಾಕೆರೆಗಳಿಗೂ ಕಡ್ಡಾಯವಾಗ ಬೇಕಿದೆ. ಐಸಿಂತ್ಯಾ(ನೀರುಕುಡಿಯುವಜೊಂಡು) ನಿವಾರಣೆಗೂಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡರೆ ನೀರುಪೋಲಾಗುವುದು ಕಡಿಮೆಯಾಗುತ್ತದೆ. ಮುಂದಿನಕೆರೆಗಳುಬೇಗ ತುಂಬಲು ಸಹಕಾರಿಯಾಗುತ್ತದೆ. –ಕೆ.ಎನ್.ತ್ಯಾಗರಾಜು, ಪರಿಸರವಾದಿ, ಕೋಲಾರ
–ಕೆ.ಎಸ್.ಗಣೇಶ್