Advertisement
ಶುಕ್ರವಾರ ನಾಗಪುರದಲ್ಲಿ ವಾರ್ಷಿಕ ವಿಜಯದಶಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಮುಂದಿನ 50 ವರ್ಷಗಳ ಕಾಲ ಚಾಲ್ತಿಯಲ್ಲಿ ಇರುವಂತೆ ಜನಸಂಖ್ಯಾ ನೀತಿ ಅನುಷ್ಠಾನ ಮಾಡಬೇಕು. ಜತೆಗೆ ಅದನ್ನು ಸಮಾನವಾಗಿ ಜಾರಿ ಮಾಡಬೇಕು’ ಎಂದಿದ್ದಾರೆ. ಇದೇ ವೇಳೆ ಅವರು 2015ರ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಪ್ರಸ್ತಾವಿಸಿದ್ದು, “ಪ್ರಸ್ತುತ ಸನ್ನಿವೇಶದಲ್ಲಿ ಸ್ಥಳೀಯ ಹಿಂದೂಗಳ ಹತ್ಯೆ, ಅವರನ್ನು ಓಡಿಸಲು ಒತ್ತಡ ಹೇರುವಂಥ ಕೃತ್ಯಗಳು ನಡೆಯುತ್ತಿವೆ ಪಶ್ಚಿಮ ಬಂಗಾಲದ ಹಿಂಸಾಚಾರ ಇದಕ್ಕೊಂದು ನಿದರ್ಶನ’ ಎಂದಿದ್ದಾರೆ.
ದೇಗುಲಗಳನ್ನು ನಿರ್ವಹಿಸುವ ಹಕ್ಕು ಭಕ್ತರಿಗೇ ಸಿಗಬೇಕು. ದೇಗುಲಗಳ ಸಂಪತ್ತನ್ನು ಹಿಂದೂ ಸಮುದಾಯದ ಅಭಿವೃದ್ಧಿಗೆ ಮಾತ್ರವೇ ಬಳಸಬೇಕು ಎಂದೂ ಭಾಗವತ್ ಒತ್ತಾಯಿಸಿದ್ದಾರೆ. ಈ ಸಂಪತ್ತನ್ನು ಇತರರ ಏಳಿಗೆಗಾಗಿ ಬಳಸುವುದು ಸರಿಯಲ್ಲ ಎಂದಿದ್ದಾರೆ.