ಸುಬ್ರಹ್ಮಣ್ಯ: ಖಾಸಗಿ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸರಕಾರ ಅನು ಮತಿ ನೀಡಿದ ಪರಿಣಾಮ ಸರಕಾರಿ ಶಾಲೆ ಗಳು ಕನ್ನಡ ಮಾಧ್ಯಮದಲ್ಲೆ ಉಳಿದವು. ಸರಕಾರಿ-ಖಾಸಗಿ ಎಂಬ ತಾರತಮ್ಯವೂ ಏರ್ಪಟ್ಟಿತು. ಕನ್ನಡ ಭಾಷೆಗೆ ಮಹತ್ವ ನೀಡಬೇಕು. ಸರಕಾರಿ ಕನ್ನಡ ಶಾಲೆಗಳ ಉಳಿವಿಗೆ ಸ್ಪಷ್ಟ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಶಾಸಕ ಎಸ್. ಅಂಗಾರ ಪ್ರತಿಪಾದಿಸಿದರು.
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೂರ್ವ ಪ್ರಾಥಮಿಕ ಶಾಲಾ ಸಮಿತಿ ಇದರ ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನದಲ್ಲಿ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ತರಗತಿಗಳ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಜ ಶಾಲೆಯಲ್ಲಿ 600 ವಿದ್ಯಾರ್ಥಿಗಳಿದ್ದರು. ಆ ಸಂಖ್ಯೆ ಈಗ 123ಕ್ಕೆ ತಲುಪಿದೆ. ಖಾಸಗಿ ಶಾಲೆಗಳಿಗೆ ಅನುಮತಿ ನೀಡಿರುವುದು ಸರಕಾರವೇ. ಶಾಲೆಗಳು ಈ ಮಟ್ಟಕ್ಕೆ ತಲುಪಲು ಸರಕಾರದೊಂದಿಗೆ ನಾವೂ ಕಾರಣರಾಗುತ್ತಿದ್ದೇವೆ ಎಂದರು.
ತಾ.ಪಂ. ಸದಸ್ಯ ಅಬ್ದುಲ್ ಗಫೂರ್, ಗ್ರಾ.ಪಂ. ಅಧ್ಯಕ್ಷ ಹಾಗೂ ಪೂರ್ವ ಪ್ರಾಥ ಮಿಕ ಶಾಲಾ ಸಮಿತಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಮಾಡಬಾಕಿಲು ಆನಂದ ಗೌಡ ಟ್ರಸ್ಟ್ ಅಧ್ಯಕ್ಷ ಆನಂದ ಗೌಡ ಕಂಬಳ, ಸಮೂಹ ಸಂಪನ್ಮೂಲ ವ್ಯಕ್ತಿ ವಸಂತ ಯೇನೆಕಲ್ಲು, ಸ.ಮಾ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಗುರು ಮುತ್ತಪ್ಪ ಗೌಡ ಜಿ., ಗ್ರಾ.ಪಂ. ಸದಸ್ಯ ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು, ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ನೇರಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ನೆಕ್ಕಿಲ, ಶಿಕ್ಷಕಿಯರಾದ ಅನಿತಾ, ಚೈತ್ರಾ ಉಪಸ್ಥಿತರಿದ್ದರು.
ಸಾನ್ನಿಧ್ಯಾ ಪ್ರಾರ್ಥಿಸಿದರು. ಶಶಿಧರ ಮಾವಿನಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿ ಶರಣ್ಯಾ ಅನಿಸಿಕೆ ವ್ಯಕ್ತಪಡಿಸಿ ದರು. ಪೂರ್ವ ಪ್ರಾಥಮಿಕ ಶಾಲಾ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಜಾಕೆ ಪ್ರಸ್ತಾವನೆಗೈದರು. ಸೋಮಶೇಖರ ನೇರಳ ನಿರೂಪಿಸಿದರು. ದಾಮೋದರ ನೇರಳ ವಂದಿಸಿದರು.