Advertisement

Panaji: ದಕ್ಷಿಣ ಗೋವಾದಲ್ಲಿ ಕಡಿಮೆಯಾದ ಪ್ರವಾಸಿಗರ ಸಂಖ್ಯೆ… ಇದೇ ಕಾರಣ ಎಂದ ವ್ಯಾಪಾರಸ್ಥರು

04:42 PM Mar 02, 2024 | Team Udayavani |

ಪಣಜಿ: ರಾಜ್ಯದಲ್ಲಿ ಪ್ರವಾಸಿ ಋತು ಪ್ರಾರಂಭವಾಗಿದೆ. ಆದರೆ ದಕ್ಷಿಣ ಗೋವಾಕ್ಕಿಂತ ಹೆಚ್ಚಿನ ಪ್ರವಾಸಿಗರು ಉತ್ತರ ಗೋವಾ ಪ್ರವೇಶಿಸುತ್ತಿದ್ದಾರೆ. ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನಗಳನ್ನು ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಿದ ಪರಿಣಾಮ ದಕ್ಷಿಣ ಗೋವಾದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಾರಂಭಿಸಿದೆ.

Advertisement

ದಕ್ಷಿಣ ಗೋವಾದ ಕರಾವಳಿ ಪ್ರದೇಶಗಳ ವ್ಯಾಪಾರ ಮತ್ತು ಪ್ರವಾಸಿಗರು ಇಳಿಮುಖವಾಗಿರುವುದರಿಂದ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳು ಆತಂಕಕ್ಕೊಳಗಾಗಿದ್ದಾರೆ.

ದಕ್ಷಿಣ ಗೋವಾದ ಬೆಳ್ಳಿ-ಮರಳಿನ ಕೊಲ್ವಾ ಕಡಲತೀರವು ವಿಶ್ವಪ್ರಸಿದ್ಧವಾಗಿದೆ, ಆದರೆ ಪ್ರವಾಸಿಗರು ಇಳಿಮುಖವಾಗಿರುವುದರಿಂದ ಕರಾವಳಿಯಾದ್ಯಂತ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ವಿದೇಶಿ ಪ್ರವಾಸಿಗರು ಈ ಬೀಚ್‍ಗೆ ಬರುವುದಿಲ್ಲ, ಸ್ಥಳೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಬೀಚ್‍ನಲ್ಲಿರುವ ವ್ಯಾಪಾರಸ್ಥರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕೋಲ್ವಾದ ಉದ್ಯಮಿ ಡಿಯಾಗೋ ಡಿಸಿಲ್ವಾ ಪ್ರತಿಕ್ರಿಯೆ ನೀಡಿ-ದಾಬೋಲಿಂ ವಿಮಾನ ನಿಲ್ದಾಣದಿಂದ ಮೋಪಾ ವಿಮಾನ ನಿಲ್ದಾಣದ ಕಡೆಗೆ ವಿಮಾನಗಳನ್ನು ತಿರುಗಿಸಿರುವುದು ನಮಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು. ಕೆಲವು ಸಂಖ್ಯೆಯಲ್ಲಿ ದೇಶೀಯ ಪ್ರವಾಸಿಗರು ಬರುತ್ತಿದ್ದರೂ ತೃಪ್ತಿಕರವಾಗಿಲ್ಲ ಎಂದರು.

ಪ್ರತಿ ವರ್ಷ ಇಂಗ್ಲೆಂಡ್‍ನಿಂದ ಬರುವ ಪ್ರವಾಸಿಗರ ಗುಂಪು ನನ್ನನ್ನು ಸಂಪರ್ಕಿಸುತ್ತಿದ್ದು, ಇನ್ನು ಮುಂದೆ ತಾನು ಮತ್ತು ತನ್ನ ಸಹೋದ್ಯೋಗಿಗಳು ಉತ್ತರ ಗೋವಾದಲ್ಲಿ ಉಳಿದುಕೊಳ್ಳುವುದಾಗಿ ಎಂದು ನಿವಾಸಿ ಹೋಟೆಲ್ ಉದ್ಯಮಿಯೊಬ್ಬರು ಹೇಳಿದರು. ಇದಕ್ಕೂ ಮುನ್ನ ವಿದೇಶಿ ಪ್ರವಾಸಿಗರ ಗುಂಪು ದಾಬೋಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿತ್ತು. ಇದೀಗ ಅವರ ವಿಮಾನವನ್ನು ಮೊಪಾ ಏರ್ ಬೇಸ್ ನಲ್ಲಿ ಇಳಿಸಲಾಗುತ್ತಿದೆ. ಇದರಿಂದ ನಮಗೆ ತೀವ್ರ ಹೊಡೆತ ಬಿದ್ದಿದೆ ಎಂದರು.

Advertisement

ಪ್ರವಾಸಿಗರ ಸಂಖ್ಯೆಯಲ್ಲಿ ಇಷ್ಟೊಂದು ಇಳಿಮುಖವಾಗಿರುವುದು ಇದೇ ಮೊದಲು ಎಂದು ಬಾಣಾವಳಿಯಲ್ಲಿ ವಾಟರ್ ಸ್ಪೋಟ್ರ್ಸ್ ಬೋಟ್ ಮತ್ತು ನಿವಾಸಿ ಹೋಟೆಲ್ ಉದ್ಯಮಿ ಪೀಲೆ ಫೆನಾರ್ಂಡಿಸ್ ಹೇಳಿದರು. ದಾಬೋಲಿ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುತ್ತಿದೆಯಾದರೂ, ಅನೇಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಮೋಪಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ದಕ್ಷಿಣ ಗೋವಾಕ್ಕೆ ಬರುವ ಪ್ರವಾಸಿಗರು ತಿರುಗಿ ಬಿದ್ದಿದ್ದಾರೆ ಎಂದರು. ಆರ್ಥಿಕವಾಗಿ ದುಷ್ಪರಿಣಾಮ ಬೀರಿ ಕೆಲಸದಿಂದ ಕೈಬಿಡುವ ಸರದಿ ಬಂದಿದೆ ಎಂದರು. ಪ್ರತಿ ವರ್ಷ ವಿದೇಶದಿಂದ ದಕ್ಷಿಣ ಗೋವಾಕ್ಕೆ ಬರುವ ಪ್ರವಾಸಿ ತನ್ನನ್ನು ಕರೆತರುವ ವಿಮಾನವು ಮೋಪಾದಲ್ಲಿ ಇಳಿಯುತ್ತಿದೆ ಎಂದು ಹೇಳಿದರು.

ನಮ್ಮ ವ್ಯಾಪಾರ ಕುಸಿದಿದೆ
ದಾಬೋಲಿ ಏರ್ ಬೇಸ್ ನಲ್ಲಿ ಇಳಿಯುವ ಹಲವು ವಿಮಾನಗಳು ಮೊಪಾ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಗುತ್ತಿರುವುದರಿಂದ ಉತ್ತರ ಗೋವಾದ ಉದ್ಯಮಿಗಳಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ ನೆರೆಯ ಮಹಾರಾಷ್ಟ್ರದ ಸಿಂಧುದುರ್ಗದ ಉದ್ಯಮಿಗಳಿಗೂ ಲಾಭವಾಗಲಿದೆ. ಎಲ್ಲಾ ಪ್ರವಾಸಿ ವಿಮಾನಗಳು ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಾರಂಭಿಸಿದರೆ, ದಕ್ಷಿಣ ಗೋವಾದಲ್ಲಿ ಪ್ರವಾಸಿಗರು ಇರುವುದಿಲ್ಲ, ಹೀಗಾಗಿ ದಕ್ಷಿಣದ ಪ್ರವಾಸೋದ್ಯಮ ವ್ಯಾಪಾರ ಕುಸಿಯುತ್ತದೆ ಎಂದು ಆಲ್ ಗೋವಾದ ಶಾಕ್ ಉದ್ಯಮಿ ಕ್ರೂಸ್ ಕಾರ್ಡೋಜ್ ಹೇಳಿದರು.

ಇದನ್ನೂ ಓದಿ: Ambani; ಪ್ರಿ ವೆಡ್ಡಿಂಗ್ ಸಂಭ್ರಮೋತ್ಸವದಲ್ಲಿ ಪಾಪ್ ಸ್ಟಾರ್ ರಿಹಾನ್ನಾ ರಾಕ್!

Advertisement

Udayavani is now on Telegram. Click here to join our channel and stay updated with the latest news.

Next