Advertisement

ಅಮಲು ಪದಾರ್ಥಗಳ ದುಷ್ಪರಿಣಾಮ: ಮಾಹಿತಿ

05:55 AM Aug 03, 2017 | |

ಬಂಟ್ವಾಳ: ಧ.ಗ್ರಾ. ಯೋಜನೆ ಬಂಟ್ವಾಳ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ,ರೋಟರಿ ಕ್ಲಬ್‌ ಬಂಟ್ವಾಳ, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಇಂಟರ್ಯಾಕ್ಟ್ ಕ್ಲಬ್‌ ಆಶ್ರಯದಲ್ಲಿ  ಜು. 28ರಂದು ಅಮಲು ಪದಾರ್ಥಗಳ ದುಷ್ಪರಿಣಾಮ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.

Advertisement

ಜಿಲ್ಲಾ ಮಲೇರಿಯಾ ಪರಿವೀಕ್ಷಕ ಜಯರಾಮ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಕಾರ್ಯಕ್ರಮ ನೆರವೇರಿಸಿ ಸಾಕ್ಷ್ಯಚಿತ್ರ ಮೂಲಕ  ಪ್ರದರ್ಶನ ನೀಡಿ ಇದರಿಂದ ಹೇಗೆ ದೂರ ವಿರಬೇಕು  ಎಂದು ವಿವರಿಸಿದರು. ಒಟ್ಟು 220 ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. 

ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಮುಖ್ಯ ಅತಿಥಿಯಾಗಿದ್ದು ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ವಲಯ ಮೇಲ್ವಿಚಾರಕ ಶಶಿಧರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next