Advertisement

ಅಮ್ಮುಂಜೆ: 6 ಮೆಟ್ರಿಕ್‌ ಟನ್‌ ಅಕ್ರಮ ಮರಳು ವಶಕ್ಕೆ

07:50 AM Aug 03, 2017 | Team Udayavani |

ಬಂಟ್ವಾಳ : ಪೊಳಲಿ – ಅಮ್ಮುಂಜೆ ಫಲ್ಗುಣಿ ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಎಸ್‌.ಕೆ. ಮೂರ್ತಿ ಅವರ ನೇತೃತ್ವದ ತಂಡ ಬುಧವಾರ  ಸಂಜೆ ದಾಳಿ ನಡೆಸಿದೆ.

Advertisement

ಸ್ಥಳೀಯ ನಿವಾಸಿಗಳಾದ ರಾಧಾಕೃಷ್ಣ ರಾವ್‌ ಮತ್ತು ಯಶೋಧರ ಮೂಲ್ಯ ಅವರಿಗೆ ಸೇರಿದೆ ಎನ್ನಲಾದ ಆರು ಮೆಟ್ರಿಕ್‌ ಟನ್‌ ಮರಳು ರಾಶಿ ಮತ್ತು ಆರು ನಾಡ ದೋಣಿಯನ್ನು ಅಧಿಕಾರಿಗಳು  ವಶಪಡಿಸಿಕೊಂಡಿದ್ದಾರೆ.

ಅದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಒಟ್ಟು 18 ಮಂದಿ ಕಾರ್ಮಿಕರನ್ನು ಕೂಡ ವಶಕ್ಕೆ ಪಡೆದು  ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣಾಧಿ ಕಾರಿ ಉಮೇಶ್‌ ಕುಮಾರ್‌ ನೇತೃತ್ವದ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಸುರತ್ಕಲ್‌- ಹಾಸನ ಪರವಾನಿಗೆ ಹೊಂದಿರುವ  ಮೂರು ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. 

ಈ ಘಟನೆಯಲ್ಲಿ ಮೂವರು 
ಚಾಲಕರ ಪೈಕಿ ಸಮೀಪದ ಮಳಲಿ ನಿವಾಸಿ ರಶೀದ್‌ ಪೊಲೀಸರಿಗೆ ಸ್ಥಳ ದಲ್ಲಿ ಸಿಕ್ಕಿದ್ದು ಉಳಿದಂತೆ ಇಬ್ಬರು ಪರಾರಿಯಾಗಿದ್ದರು. 
ಪೊಲೀಸ್‌ ಸಿಬಂದಿ ಒಬ್ಬರನ್ನು ತಳ್ಳಿ ಪರಾರಿಯಾಗಿದ್ದ ಕೈಕಂಬ ಸೂರಲ್ಪಾಡಿ ನಿವಾಸಿ ಖಲಂದರ್‌ ಶಾಫಿಯನ್ನು ಬೆನ್ನಟ್ಟಿದ ಪೊಲೀಸರು ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಆತನ ವಿರುದ್ಧ ಕಳವು ಮಾತ್ರವಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next