Advertisement
ಇಮ್ಯುನಿಟಿ ಪಾಸ್‌ಪೋರ್ಟ್ ಯಾಕಾಗಿ? ಇಮ್ಯುನಿಟಿ ಅಥವಾ ರೋಗನಿರೋಧಕ ಪಾಸ್‌ಪೋರ್ಟ್ ಅನ್ನು ಸರಕಾರ ನೀಡುತ್ತದೆ. ನಿರ್ದಿಷ್ಟ ವ್ಯಕ್ತಿ ಕೋವಿಡ್‌ನಿಂದ ಗುಣಮುಖನಾಗಿದ್ದಾನೆ ಅಥವಾ ಕೋವಿಡ್ ಹೊಂದಿಲ್ಲ ಎಂಬುದಕ್ಕೆ ಪ್ರಮಾಣ ಪತ್ರವಾಗಿ ಇದು ಇರುತ್ತದೆ. ಇದರಿಂದ ವ್ಯಕ್ತಿ ವಿದೇಶಗಳಿಗೆ ತೆರಳಬಹುದು. ಮುಕ್ತವಾಗಿ ಸಂಚರಿಸಬಹುದು. ವಿವಿಧ ದೇಶಗಳು ಆರ್ಥಿಕವಾಗಿ ಕಂಗಾಲಾಗಿದ್ದು, ಈ ಹಿಂದಿನಂತೆ ವ್ಯವಹಾರಗಳನ್ನು ಉತ್ತೇಜಿಸಲು ಇಮ್ಯುನಿಟಿ ಪಾಸ್‌ಪೋರ್ಟ್ ಹೊರತರಲು ಚಿಂತನೆ ನಡೆಸಿವೆ.
ಇಮ್ಯುನಿಟಿ ಪಾರ್ಸ್‌ಪೋರ್ಟ್‌ಗಳನ್ನು ನೀಡಲು ಅಮೆರಿಕ, ಚಿಲಿ, ಜರ್ಮನಿ, ಇಟಲಿ, ಬ್ರಿಟನ್ ದೇಶಗಳು ಮುಂದಾಗಿವೆ. ಈ ಮೂಲಕ ವ್ಯಕ್ತಿ ಕೋವಿಡ್‌ನಿಂದ ಗುಣಮುಖವಾದ ಬಗ್ಗೆ ದಾಖಲೆಗಳನ್ನು ಕೊಡಲಾಗುತ್ತದೆ. ಕೋವಿಡ್ ಈವರೆಗೆ ತಗುಲದವರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಚಿಲಿ ಈ ಯೋಜನೆಯನ್ನು ಹೊರತರಲು ಹೆಚ್ಚು ಉತ್ಸುಕತೆಯನ್ನು ನಡೆಸಿದ್ದು, ಕೆಲವೇ ವಾರಗಳಲ್ಲಿ ಜಾರಿಗೊಳಿಸಲಿದೆ. ಈ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಇಮ್ಯುನಿಟಿ ಪಾಸ್‌ಪೋರ್ಟ್ ಹೊಂದಿದ ದೇಶವೆಂದು ಕರೆಯಲು ಸಿದ್ಧತೆ ನಡೆಸಿದೆ. ಇಮ್ಯುನಿಟಿ ಪಾರ್ಸ್‌ಪೋರ್ಟ್‌ನಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ತೊಂದರೆಯೇ ಹೆಚ್ಚು ಎನ್ನುವುದು ಈಗ ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ವಲಯಗಳ ತಜ್ಞರ ವಾದ. ಕಾರಣ ಕೋವಿಡ್‌ನಿಂದ ಗುಣಮುಖನಾದ ನಿರ್ದಿಷ್ಟ ವ್ಯಕ್ತಿ ಮತ್ತೆ ಕೋವಿಡ್‌ಗೆ ಈಡಾಗುವ ಸಾಧ್ಯತೆ ಓರ್ವ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯಷ್ಟೇ ಇರುತ್ತದೆ. ಪ್ರವಾಸದ ವೇಳೆಯಾದರೆ ಯಾವಾಗ ಯಾರಿಂದ ಕೋವಿಡ್‌ಗೆ ಆತ ಕೋವಿಡ್‌ಗೆ ಈಡಾಗಿದ್ದಾನೆ ಎಂದು ಹೇಳುವುದಕ್ಕೆ ಸಾಧ್ಯವಾಗದು. ದಾಖಲೆಗಳನ್ನು ಇಟ್ಟುಕೊಂಡು, ಅಥವಾ ಒಂದು ಬಾರಿ ಜ್ವರ ಪರೀಕ್ಷೆಯ ಮೂಲಕ ಕೋವಿಡ್ ಪತ್ತೆಹಚ್ಚಲು ಸಾಧ್ಯವಿಲ್ಲ.
Related Articles
Advertisement
ಆದ್ದರಿಂದ ಕೋವಿಡ್ ವಿಚಾರದಲ್ಲಿ ಇದಮಿತ್ಥಂ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಜನರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸದಿದ್ದಲ್ಲಿ, ಇಮ್ಯುನಿಟಿ ಪಾಸ್‌ಪೋರ್ಟ್ ಹೊಂದಿದ ವ್ಯಕ್ತಿಯೇ ರೋಗ ವಾಹಕನಾಗಿ ಕೆಲಸ ಮಾಡಿದರೆ ಅದರಿಂದ ಪರಿಣಾಮವೇನು ಎಂದು ತಜ್ಞರು ಇದನ್ನು ಪ್ರಶ್ನಿಸಿದ್ದಾರೆ.