Advertisement

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

07:01 PM Aug 15, 2020 | mahesh |

ಭೋಪಾಲ್‌: ಕೋವಿಡ್ ಸೋಂಕಿನ ಈ ಸಂದರ್ಭ ದಲ್ಲಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವತ್ತ ಜನರು ಗಮನ ನೆಟ್ಟಿರುವಾಗಲೇ ಮಧ್ಯ ಪ್ರದೇಶದಲ್ಲಿ ವಿಶೇಷವಾದ ಹರ್ಬಲ್‌ ಸೀರೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

Advertisement

ಈ ಸೀರೆಗಳಿಗೆ “ಆಯುರ್ವಸ್ತ್ರ’ ಎಂದು ನಾಮ ಕರಣ ಮಾಡಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಅಂಶಗಳುಳ್ಳ ಗಿಡಮೂಲಿಕೆಗಳನ್ನು ಬಳಸಿ ಇವುಗಳನ್ನು ಸಿದ್ಧಪಡಿಸಲಾಗಿದೆಯಂತೆ. ಕೇವಲ ಸೀರೆ ಮಾತ್ರವಲ್ಲದೆ, ಇತರೆ ಬಟ್ಟೆಬರೆಗಳನ್ನು ಕೂಡ ಇದೇ ಮಾದರಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ಮಧ್ಯಪ್ರದೇಶ ಕೈಮಗ್ಗ ಮತ್ತು ಕರಕುಶಲ ನಿಗಮ ಹೇಳಿದೆ.

ತಯಾರಿಕೆ ಹೇಗೆ?: ಲವಂಗ, ಏಲಕ್ಕಿ, ಜಾಪತ್ರಿ, ದಾಲಿcನ್ನಿ, ಕಾಳುಮೆಣಸು, ಜೀರಿಗೆ, ಪಲಾವ್‌ ಎಲೆ ಮತ್ತಿತರ ಮಸಾಲೆ ಪದಾರ್ಥಗಳನ್ನು ಪುಡಿ ಮಾಡಿ, 48 ಗಂಟೆಗಳಿಗೂ ಹೆಚ್ಚು ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ. ದೊಡ್ಡ ಕುಲುಮೆಯಲ್ಲಿ ಇದನ್ನು ಕುದಿಸಿದಾಗ ಆವಿ ಬರಲು ಶುರುವಾಗುತ್ತದೆ. ಆ ಆವಿಯನ್ನು ಕೆಲ ಗಂಟೆಗಳ ಕಾಲ ಬಟ್ಟೆಗಳ ಮೇಲೆ ಹಾಯಿಸ ಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಆ ಬಟ್ಟೆ
ಗಳಿಂದ ಮಾಸ್ಕ್, ಸೀರೆ ಅಥವಾ ಇತರೆ ಉಡುಪು ಗಳನ್ನು ತಯಾರಿಸಲಾಗುತ್ತದೆ.

6 ದಿನ ಬೇಕು: ರೋಗ ನಿರೋಧಕ ಶಕ್ತಿಯುಳ್ಳ ಒಂದು ಸೀರೆ ತಯಾರಿಸಲು 5 ರಿಂದ 6 ದಿನಗಳು ಬೇಕಾಗುತ್ತದೆ. ಅಲ್ಲದೆ, ಅದರಲ್ಲಿನ ರೋಗನಿ ರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ 4ರಿಂದ 5 ಬಾರಿ ಸೀರೆಯನ್ನು ತೊಳೆಯುವವರೆಗೂ ಇರುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಇದ್ದಂಥ ಶತಮಾನಗಳಷ್ಟು ಹಳೆಯ ವಿಧಾನವಿದು ಎಂದು ಜವಳಿ ತಜ್ಞ ವಿನೋದ್‌ ಮಲೇವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next