Advertisement

ವಲಸೆ ಮಕ್ಕಳ ಶಿಕ್ಷಣ: ಹೊಸ ನೀತಿಗೆ ಸರ್ಕಾರ ಅನುಮೋದನೆ

10:57 PM Dec 10, 2019 | Lakshmi GovindaRaj |

ಬೆಂಗಳೂರು: ಶಾಲಾ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಪುನರ್‌ ಶಾಲೆಗೆ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಲಸಿಗ ಮಕ್ಕಳ ಹಾಗೂ ವಲಸಿಗ ಕೂಲಿಕಾರರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ನೀತಿ-2019ಕ್ಕೆ ಅನುಮೋದನೆ ನೀಡಿದೆ.

Advertisement

ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷ ವಯಸ್ಸಿನ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಕರ್ತವ್ಯ. ಸಂವಿಧಾನದ 21(ಎ)ಕಲಂ ಪ್ರಕಾರ 6ರಿಂದ 14 ವರ್ಷದ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು. ಈ ಹಿನ್ನೆಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಪ್ರಯತ್ನ ನಡೆ ಸುತ್ತಿದೆ. ಇಷ್ಟಾದರೂ ವಲಸಿಗ ಮಕ್ಕಳ ಹಾಗೂ ವಲಸಿಗ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತ ರಾಗುತ್ತಿರುವುದು ಇಲಾಖೆ ಗಮನಕ್ಕೆ ಬರುತ್ತಲೇ ಇದೆ.

ಷರತ್ತುಗಳು: ವಲಸೆ ಮಕ್ಕಳ ಶಿಕ್ಷಣಕ್ಕಾಗಿ ನಿರ್ದೇಶಿಸಿರುವ ಎಲ್ಲಾ ಕ್ರಮಗಳು ಮತ್ತು ಕಾರ್ಯತಂತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಜಾರಿಗೆಯಾಗುವಂತೆ ಕ್ರಮವಹಿಸಬೇಕು. ವಲಸಿಗ ಮಕ್ಕಳು ಮತ್ತು ವಲಸಿಗ ಕೂಲಿಕಾರರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು. ಈ ನೀತಿಯ ವಿವರಗಳನ್ನು ಜಿಲ್ಲೆ, ತಾಲೂಕು, ಕ್ಲಸ್ಟರ್‌ ಹಾಗೂ ಶಾಲಾ ಹಂತಕ್ಕೆ ತಲುಪುವಂತೆ ಕ್ರಮವಹಿಸಬೇಕು.

ಮಕ್ಕಳ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣಕ್ಕೆ ಬೇರೆ ಇಲಾಖೆಗಳ ಸಹಕಾರ ಪಡೆಯಬೇಕು. ಮೇಲ್ವಿಚಾರಣ ಸಮಿತಿ ಪ್ರತಿ 3ತಿಂಗಳಿಗೆ ಸಭೆ ಸೇರಿ ಶಾಲಾ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರಕಿಸುವ ಬಗ್ಗೆ ಪ್ರಗತಿ ಪರಿಶೀಲಿಸಬೇಕು. ಕಾಲಕಾಲಕ್ಕೆ ರಾಜ್ಯ ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕರು ವಲಸೆ ಮಕ್ಕಳ ಮೂಲಭೂತ ಶಿಕ್ಷಣದ ಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ ಒಪ್ಪಿಸಬೇಕು. ನ್ಯಾಯಲಯಕ್ಕೂ ಇದರ ವರದಿ ಸಲ್ಲಿಸಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next