Advertisement

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಅಪಾರ 

01:08 PM Dec 26, 2018 | |

. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ?
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಅದರಲ್ಲಿಯೂ, ಆಹಾರೋತ್ಪನ್ನ, ಶುದ್ಧೀಕರಿಸುವ ನೀರಿನ ಘಟಕಗಳಲ್ಲಿ ಗುಣಮಟ್ಟದ ಪರಿಶೀಲನೆಗೆ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳು ಒದಗಿ ಬರುತ್ತಿದೆ. ಅದರಲ್ಲಿಯೂ ರಸಾಯನಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗ ಕಲಿತವರಿಗೂ ಹೆಚ್ಚಿನ ಉದ್ಯೋಗಾವಕಾಶವಿದೆ. ಈ ವಿಷಯದಲ್ಲಿ ಪರಿಣತಿ ಪಡೆದವರು ಶಿಕ್ಷಕರಾಗಿಯೂ ಕೆಲಸ ನಿರ್ವಹಿಸಬಹುದು.

Advertisement

.  ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆಯೇ? ಕಲಿಕೆ ಅನಂತರ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆಯೇ?
ಈ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ. ಸ್ನಾತಕೋತ್ತರ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯ ಸೆಮಿಸ್ಟರ್‌ನಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಅನೇಕ ಕಾಲೇಜುಗಳಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸದ ಜತೆಗೆ ಪಿಎಚ್‌.ಡಿ. ಅಧ್ಯಯನಕ್ಕೂ ಅವಕಾಶವಿದೆ. ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಸುಮಾರು 40 ರಿಂದ 70 ಸಾವಿರ ರೂ. ನಷ್ಟು ವಿದ್ಯಾರ್ಥಿ ವೇತನ ಪಡೆಯಬಹುದು.

. ಇನ್‌ಸ್ಪಾಯರ್‌ ಅವಾರ್ಡ್‌ ವಿಜೇತ ವಿದ್ಯಾರ್ಥಿಗಳ ಜತೆ ತೊಡಗಿಸಿಕೊಳ್ಳುತ್ತೀರಿ. ಮಕ್ಕಳಲ್ಲಿ ವಿಜ್ಞಾನ ಕಲಿಕೋತ್ಸಾಹ ಹೇಗಿದೆ?
ಪಿಯುಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇನ್‌ಸ್ಪಾಯರ್‌ ಕಲಿಕೆಗೆ ಅರ್ಹರಾಗುತ್ತಾರೆ. ಈ ಕಲಿಕೆಗೆ ಅವಕಾಶಕ್ಕೆ ಹತ್ತನೇ ತರಗತಿಯಲ್ಲಿ ಶೇ. 90.2ರಷ್ಟು ಅಂಕ ಪಡೆದಿರಬೇಕು. ಮಂಗಳೂರಿನಲ್ಲಿ ಕಳೆದ ಮೂರು ತಿಂಗಳಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇನ್‌ಸ್ಪಾಯರ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ವಿಜ್ಞಾನದ ತಳಹದಿಯ ಜತೆಗೆ ಸಂಶೋಧನೆಗಳನ್ನು ಕೂಡ ಕಲಿಸಲಾಗುತ್ತದೆ.

ಜೀವ ವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಬದಲಾವಣೆಗಳೇನು?
ಜೀವ ವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಿನ ಬದಲಾವಣೆಯಾಗಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅನೇಕ ಕೋರ್ಸ್‌ಗಳು ಬಂದಿವೆ. ಅದರಲ್ಲಿಯೂ ಕಂಪ್ಯೂಟರೇಷನಲ್‌ ಬಯೋಲಜಿ ಸಹಿತ ಹೊಸ ಕೋರ್ಸ್‌ಗಳು ಕಾಲಿಟ್ಟಿವೆ.

ನವೀನ್‌ ಭಟ್‌ ಇಳಂತಿಲ

Advertisement
Advertisement

Udayavani is now on Telegram. Click here to join our channel and stay updated with the latest news.

Next