Advertisement

ಅಪಾರ ಉದ್ಯೋಗಾವಕಾಶ ಮೆಟಲರ್ಜಿಕಲ್‌ ಎಂಜಿನಿಯರಿಂಗ್‌

12:02 AM Jan 15, 2020 | mahesh |

ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಪೂರೈಸಿದವರು ಮೆಟೀರಿಯಲ್ಸ್‌ ವಿಜ್ಞಾನಿಗಳಾಗಿ, ಮೆಟಲರ್ಜಿಕಲ್‌ ಲ್ಯಾಬೊರೇಟರಿ ಟೆಕ್ನೀಶಿಯನ್‌ಗಳಾಗಿ, ಗಣಿಗಾರಿಕೆ ಎಂಜಿನಿಯರ್‌ ಆಗಿ, ಪಾಲಿಮರ್‌ ಎಂಜಿನಿಯರ್‌ ಆಗಿ, ಮೆಟೀರಿಯಲ್ಸ್‌ ಎಂಜಿನಿಯರ್‌, ಪ್ಲಾಂಟ್‌ ಇಕ್ವಿಪ್‌ಮೆಂಟ್‌ ಎಂಜಿನಿಯರ್‌, ಬ್ಯಾಲಿಸ್ಟಿಕ್ಸ್‌ ಎಂಜಿನಿಯರ್‌, ಕ್ವಾಲಿಟಿ ಪ್ಲಾನಿಂಗ್‌ ಎಂಜಿನಿಯರ್‌, ಸೀನಿಯರ್‌ ಪ್ರೋಸೆಸ್‌ ಎಂಜಿನಿಯರ್‌, ವೆಂಡರ್‌ ಡೆವಲಪ್‌ಮೆಂಟ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಲು ಅವಕಾಶವಿದೆ.

Advertisement

ಲೋಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಮೆಟಲರ್ಜಿಕಲ್‌ ಎಂಜಿನಿಯರಿಂಗ್‌. ಲೋಹಗಳ ಗಣಿಗಾರಿಕೆ ತಂತ್ರಜ್ಞಾನ, ವಿನ್ಯಾಸ, ಸಂಸ್ಕರಣೆ, ಪರಿಸರದ ಮೇಲೆ ಲೋಹಗಳ ಪರಿಣಾಮ ಮೊದಲಾದವು ಈ ಅಧ್ಯಯನದಲ್ಲಿ ಒಳಗೊಂಡಿರುತ್ತವೆ. ಆಧುನಿಕ ಯುಗದ ದೈನಂದಿನ ಜೀವನದಲ್ಲಿ ಲೋಹಗಳ ಬಳಕೆ ಹೆಚ್ಚಾಗಿದೆ. ಲೋಹಗಳಿಗೆ ಸಂಬಂಧಿಸಿದ ಉದ್ಯಮಗಳು ಕೂಡ ಬೆಳೆಯುತ್ತಲೇ ಇವೆ. ಹಾಗಾಗಿ ಮೆಟಲರ್ಜಿಕಲ್‌ ತಜ್ಞರಿಗೆ ಬೇಡಿಕೆಯೂ ಇದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ ಬಗ್ಗೆ ಆಸಕ್ತಿ ಉಳ್ಳವರು ಈ ಕೋರ್ಸ್‌ ಅಧ್ಯಯನ ಮಾಡಬಹುದು. ಇದು ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಜತೆಗೆ ಎಂಜಿನಿಯರಿಂಗ್‌ ಕ್ಷೇತ್ರದ ಜ್ಞಾನವನ್ನೂ ಸಮಗ್ರವಾಗಿ ತಿಳಿಸುವ ಕೋರ್ಸ್‌.

ಏನೆಲ್ಲ ವಿಷಯಗಳು?
ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಅಧ್ಯಯನವನ್ನು ಮುಖ್ಯವಾಗಿ ಫಿಸಿಕಲ್‌ ಮೆಟಲರ್ಜಿ, ಎಕ್ಸ್‌ಟ್ರಾಕ್ಟಿವ್‌ ಮೆಟಲರ್ಜಿ ಮತ್ತು ಮಿನರಲ್‌ ಪ್ರೊಸೆಸಿಂಗ್‌ ಎಂಬ ಮೂರು ವಿಭಾಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟಾರೆಯಾಗಿ ಈ ಕೋರ್ಸ್‌ನಲ್ಲಿ ಬೇಸಿಕ್‌ ಹೈಡ್ರೋ ಮೆಟಲರ್ಜಿ, ಬೇಸಿಕ್‌ ಪಿಸಿಕಲ್‌ ಮೆಟಲರ್ಜಿ, ಬೇಸಿಕ್‌ ಪ್ಯಾರೋಮೆಟಲರ್ಜಿ, ಇಲೆಕ್ಟ್ರೋಮೆಟಲರ್ಜಿ, ಫ್ಲೋಟೇಷನ್‌, ಹೀಟ್‌ ಟ್ರೀಟ್‌ಮೆಂಟ್‌, ಹೈಡ್ರೋಮೆಟಲರ್ಜಿ, ಲಿಟರೇಚರ್‌ ಸರ್ವೆ, ಮೆಕ್ಯಾನಿಕಲ್‌ ಮೆಟಲರ್ಜಿ, ಮೆಟಲರ್ಜಿಕಲ್‌ ಅನಾಲಿಸಿಸ್‌, ಮಿನರಲ್ಸ್‌ ಪ್ರೊಸೆಸಿಂಗ್‌, ಫಿಸಿಕಲ್‌ ಮೆಟಲರ್ಜಿ, ಪೈರೋಮೆಟಲರ್ಜಿ, ರಿಫ್ರ್ಯಾಕ್ಟರಿ ಮೆಟೀರಿಯಲ್ಸ್‌, ವೆಲ್ಡಿಂಗ್‌ ಮೆಟಲರ್ಜಿ ಮೊದಲಾದ ವಿಷಯಗಳ ಅಧ್ಯಯನವಿರುತ್ತದೆ.

ಯಾವ ರೀತಿಯ ಉದ್ಯೋಗಾವಕಾಶ?
ಮಟಲರ್ಜಿಕಲ್‌ ಎಂಜಿನಿಯರಿಂಗ್‌ ಪದವೀಧರರಿಗೆ ಭಾರತದಲ್ಲಿಯೂ ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಬೇಡಿಕೆ ಇದೆ. ಉತ್ತಮ ವೇತನ ಸೌಲಭ್ಯಗಳೂ ಇವೆ. ಕೌಶಲ ಮತ್ತು ಅನುಭವ ಹೆಚ್ಚಾದಂತೆ ದೊರೆಯುವ ವೇತನ ಕೂಡ ಅಧಿಕವಾಗುತ್ತಾ ಹೋಗುತ್ತದೆ. ಅದರಲ್ಲಿಯೂ ಐಐಟಿ, ಎನ್‌ಐಟಿಯಂತಹ ವಿದ್ಯಾಸಂಸ್ಥೆಗಳಲ್ಲಿ ಕೋರ್ಸ್‌ ಪೂರೈಸಿದವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಪೂರೈಸಿದವರು ಮೆಟೀರಿಯಲ್ಸ್‌ ವಿಜ್ಞಾನಿಗಳಾಗಿ, ಮೆಟಲರ್ಜಿಕಲ್‌ ಲ್ಯಾಬೊರೇಟರಿ ಟೆಕ್ನೀಷಿಯನ್‌ಗಳಾಗಿ, ಗಣಿಗಾರಿಕೆ ಎಂಜಿನಿಯರ್‌ ಆಗಿ, ಪಾಲಿಮರ್‌ ಎಂಜಿನಿಯರ್‌ ಆಗಿ, ಮೆಟೀರಿಯಲ್ಸ್‌ ಎಂಜಿನಿಯರ್‌, ಪ್ಲಾಂಟ್‌ ಇಕ್ವಿಪ್‌ಮೆಂಟ್‌ ಎಂಜಿನಿಯರ್‌, ಬ್ಯಾಲಿಸ್ಟಿಕ್ಸ್‌ ಎಂಜಿನಿಯರ್‌, ಕ್ವಾಲಿಟಿ ಪ್ಲಾನಿಂಗ್‌ ಎಂಜಿನಿಯರ್‌, ಸೀನಿಯರ್‌ ಪ್ರೋಸೆಸ್‌ ಎಂಜಿನಿಯರ್‌, ವೆಂಡರ್‌ ಡೆವಲಪ್‌ಮೆಂಟ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಲು ಅವಕಾಶವಿದೆ. ಅಲ್ಲದೆ ವಿಶ್ವವಿದ್ಯಾನಿಲಯ, ಕಾಲೇಜುಗಳಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಬಹುದು. ಮೆಟಲರ್ಜಿಕಲ್‌ ಎಂಜಿನಿಯರ್‌ಗಳು ಮೆಟಲರ್ಜಿಕಲ್‌ ವಿಜ್ಞಾನಿಗಳಂತೆಯೇ ಕಾರ್ಯನಿರ್ವಹಿಸುತ್ತಾರೆ.

ಕೋರ್ಸ್‌ಗೆ ಆಯ್ಕೆ
ವಿಜ್ಞಾನ ವಿಷಯದಲ್ಲಿ ಪಿಯುಸಿ (ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥ್ಸ್) ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಅಧ್ಯಯನ ಮಾಡಲು ಅರ್ಹರು. ಇದು 4 ವರ್ಷಗಳ ಕೋರ್ಸ್‌. ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ನಡೆಯುತ್ತದೆ. ದೇಶದ ವಿವಿಧೆಡೆ ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಶಿಕ್ಷಣ ನೀಡುವ ಸಂಸ್ಥೆಗಳಿವೆ. ಮಂಗಳೂರಿನ ಸುರತ್ಕಲ್‌ ಎನ್‌ಐಟಿಕೆಯಲ್ಲಿಯೂ ಈ ಕೋರ್ಸ್‌ ಇದೆ.

Advertisement

-  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next