ಮೈಸೂರು: ದೇಶದಲ್ಲಿ ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಯುವ ಬ್ರಿಗೇಡ್ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇದನ್ನೂ ಓದಿ:ಒಮಿಕ್ರಾನ್ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ
ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ ವೆಂಕಟಕೃಷ್ಣಯ್ಯ (ತಾತಯ್ಯ) ಜಯಂತೋತ್ಸವ ಹಾಗೂ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮಾತನಾಡಿ, ಕ್ರಿಪ್ಟೋ- ಕ್ರಿಶ್ಚಿಯನ್ನರು ಹಿಂದು ಧರ್ಮದ ಆಚರಣೆ ಅಳವಡಿಸಿಕೊಂಡು ಅಮಾಯಕರನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು. ಈಗ ಕ್ರಿಸ್ತನಿಗೆ ಅಷ್ಟ್ರೋತ್ತರ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್ ಮುಂದೆ ಗರುಡಗಂಬ ಸ್ಥಾಪಿಸಲಾಗುತ್ತಿದೆ.
ರಥೋತ್ಸವ, ಉರುಳುಸೇವೆ ಸೇರಿ ನಾನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೆಲ್ಲ ಗಮನಿಸಿದರೆ 365 ಕೋಟಿ ಹಿಂದು ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುತ್ತಿದೆ. ಈ ಮೂಲಕ ಅಮಾಯಕರನ್ನು ಕ್ರೈಸ್ತ ಮತಕ್ಕೆ ಆಕರ್ಷಿಸಲಾಗುತ್ತಿದೆ.
ಇದರ ತಡೆಗೆ ಮತಾಂತರ ನಿಷೇಧ ಕಾಯಿದೆ ಅವಶ್ಯಕ ಎಂದರು. ಈ ನಾಡಿನಲ್ಲಿ ಕ್ರಿಪ್ಟೋ ಕ್ರಿಶ್ಚಿಯನ್‌ಗಳು ಸೇರಿಕೊಂಡಿದ್ದಾರೆ.ಅವರು ಮೇಲ್ನೋಟಕ್ಕೆ ಹಿಂದು ಗಳಾಗಿದ್ದು, ಹಿಂದು ಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.