ನೆಲ್ಯಾಡಿ: ಉದನೆಯಿಂದ ಶಿಬಾಜೆಗೆ ಸಂಪರ್ಕ ಕಲ್ಪಿಸುವ ಜಿ.ಪಂ.ರಸ್ತೆಯ ಪೈಕಿ 1 ಕಿ.ಮೀ.ಗೆ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿಗೆ ಕಳಪ್ಪಾರಿನಲ್ಲಿ ಗುದ್ದಲಿಪೂಜೆ ನಡೆಯಿತು.
ಸುಳ್ಯ ಶಾಸಕ ಎಸ್. ಅಂಗಾರ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಉದನೆ-ಶಿಬಾಜೆ ರಸ್ತೆ ಡಾಮರು ಕಾಮಗಾರಿಗೆ ಈ ಭಾಗದ ಜನರ ಬಹುದಿನಗಳ ಬೇಡಿಕೆ. ಹಿಂದೆ ಈ ರಸ್ತೆಗೆ ಡಾಮರು ಹಾಕಲು ಪ್ರಸ್ತಾವನೆ ಸಲ್ಲಿಸಿ ದ್ದರೂ ಮಂಜೂರಾತಿಯಾಗಿರಲಿಲ್ಲ. ಉದನೆ-ಶಿಬಾಜೆ ರಸ್ತೆಯ ಪ್ರಾರಂಭದ 1.9 ಕಿ.ಮೀ. ರಸ್ತೆ ವಿಸ್ತರಣೆ ಹಾಗೂ ಡಾಮರು ಹಾಕಲು ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿಯ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಅನಂತರದ 1 ಕಿ.ಮೀ. ರಸ್ತೆ ಅಭಿವೃದ್ಧಿಗೆ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 1.07 ಕೋಟಿ ರೂ.ಬಿಡುಗಡೆಗೊಂಡಿದ್ದು, ಈ ಪೈಕಿ 300 ಮೀ. ಕಾಂಕ್ರೀಟ್ ಹಾಗೂ 700 ಮೀ. ಡಾಮರು ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಟೆಂಡರ್ ಆಗಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಮುಂದಿನ ಸಾಲಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬಾಕಿ ಉಳಿದ 2 ಕಿ.ಮೀ. ಡಾಮರು ಹಾಕಲಾಗುವುದು ಎಂದು ತಿಳಿಸಿದರು.
ಶಿರಾಡಿ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಗೌಡ, ಉಪಾಧ್ಯಕ್ಷೆ ಬಿಂದು ಶಶಿಧರ್, ಸದಸ್ಯರಾದ ರಾಜೇಶ್ ಕೆ.ಜೆ., ಪ್ರಕಾಶ್ ಗುಂಡ್ಯ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಪಿಎಲ್‌ಡಿ ಬ್ಯಾಂಕ್‌ನ ಕೋಶಾಧಿಕಾರಿ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ, ಬಿಜೆಪಿ ಶಿರಾಡಿ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಶಿರಾಡಿ ಗ್ರಾ.ಪಂ. ಮಾಜಿ ಸದಸ್ಯ ಸೆಬಾಸ್ಟಿನ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಶಿಧರ ಶಿರಾಡಿ, ಹೋರಾಟ ಸಮಿತಿ ಅಧ್ಯಕ್ಷ ಬೇಬಿ., ಕಾರ್ಯದರ್ಶಿ ಸನ್ನಿ ಕೆ.ಎಸ್., ಗ್ರಾಮಸ್ಥರಾದ ಡೊಂಬಯ್ಯ ಗೌಡ ಕುದೊRàಳಿ, ವಿಜಯನ್ ಅಡ್ಡಹೊಳೆ, ಸೋಮಶೇಖರ ಶಿರಾಡಿ, ದಾಮೋದರ ಗೌಡ ಗುಂಡ್ಯ, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಶಾಜಿ ಕೆ.ಪಿ., ಲಕ್ಷ್ಮಣ, ಗುತ್ತಿಗೆದಾರ ನಾರಾಯಣ ಕೇಕಡ್ಕ ಮತ್ತಿತರರು ಉಪಸ್ಥಿತರಿದ್ದರು. ಕಳಪ್ಪಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವ ಸ್ಥಾನದ ಅರ್ಚಕ ಸುದರ್ಶನ್ ಅವರು ಪೂಜೆ ನೆರವೇರಿಸಿದರು. ಡೊಂಬಯ್ಯ ಗೌಡ ಸ್ವಾಗತಿಸಿ, ಸನ್ನಿ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.