Advertisement

IMF: ಪಾಕ್‌ಗೆ ಎರಡನೇ ಕಂತಿನ ಸಾಲ ಇಂದು ಐಎಂಎಫ್ ಮಾತುಕತೆ

12:35 AM Nov 02, 2023 | Pranav MS |

ಇಸ್ಲಾಮಾಬಾದ್‌: ಆರ್ಥಿಕಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ಥಾನಕ್ಕೆ 3 ಶತಕೋಟಿ ಡಾಲರ್‌ ಸಾಲದ 2ನೇ ಕಂತಿನ ಮೊತ್ತ 710 ದಶಲಕ್ಷ ಡಾಲರ್‌ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಧಿಕಾರಿಗಳು ಮತ್ತು ಪಾಕ್‌ನ ಮುಖ್ಯಸ್ಥರು ಗುರುವಾರ ಮಾತುಕತೆ ಆರಂಭಿಸಲಿದ್ದಾರೆ.

Advertisement

ಪ್ರಸಕ್ತ ಹಣಕಾಸು ವರ್ಷದ ಜುಲೈ ಮತ್ತು ಸೆಪ್ಟಂಬರ್‌ ತ್ತೈಮಾಸಿಕದ ಅವಧಿಯಲ್ಲಿ ದೇಶದಲ್ಲಿ ವಿತ್ತೀಯ ಕಾರ್ಯಾ ಚಟುವಟಿಕೆ ಹೇಗಿತ್ತು ಎಂಬು ದನ್ನು ಪರಮಾರ್ಶಿಸುವ ನಿಟ್ಟಿ ನಲ್ಲಿ ಐಎಂಎಫ್ ನಿಯೋಗವು ಇಸ್ಲಾಮಾಬಾದ್‌ಗೆ ಗುರುವಾರ ಬಂದಿಳಿಯಲಿದೆ. ಬಳಿಕ ಪಾಕಿ ಸ್ತಾನದ ಆಯವ್ಯಯ, ವೆಚ್ಚ, ಗುರಿಸಾಧನೆಗಳನ್ನು ಪರಿಶೀಲಿಸಿ ಅನಂತರದಲ್ಲಿ 2ನೇ ಕಂತಿನ ಸಾಲ ಬಿಡುಗಡೆಯ ನಿರ್ಣಯಕ್ಕೆ ಅಗತ್ಯವಾದ ವರದಿ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಐಎಂಎಫ್ ಪಾಕ್‌ಗೆ 1.2 ಶತಕೋಟಿ ಡಾಲರ್‌ನ ಮೊದಲ ಕಂತಿನ ಸಾಲವನ್ನು ಬಿಡುಗಡೆಗೊಳಿಸಿದ್ದು, ಅದರಿಂದಲೇ ಪಾಕ್‌ ಕೊಂಚ ಚೇತರಿಸಿಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next