Advertisement

ಭಾರೀ ಆಮದು ಸುಂಕ ಹೇರುವ ಟ್ರಂಪ್‌ ಕ್ರಮಕ್ಕೆ IMF ವಿರೋಧ

11:48 AM Mar 03, 2018 | Team Udayavani |

ವಾಷಿಂಗ್ಟನ್‌ : ಉಕ್ಕು ಮತ್ತು ಅಲ್ಯುಮಿನಿಯಂ ಆಮದು ಮೇಲೆ ಭಾರೀ ಸುಂಕವನ್ನು ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕ್ರಮದಿಂದ ಅಮೆರಿಕದ ಹೊರಗೆ ಮಾತ್ರವಲ್ಲದೆ ಸ್ವತಃ ಅಮರಿಕದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಐಎಂಎಫ್ ಎಚ್ಚರಿಕೆ ನೀಡಿದೆ. 

Advertisement

ಅಧ್ಯಕ್ಷ ಟ್ರಂಪ್‌ ಮೊನ್ನೆ ಗುರುವಾರ ಅಮೆರಿಕ ಉತ್ಪಾದಕರ ಹಿತರಕ್ಷಣೆಗಾಗಿ ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಅನುಕ್ರಮವಾಗಿ ಶೇ.25 ಮತ್ತು ಶೇ.10 ಸುಂಕವನ್ನು ಹೇರಲಾಗುವುದೆಂದು ಪ್ರಕಟಿಸಿದ್ದರು.

ಟ್ರಂಪ್‌ ಅವರ ಭಾರೀ ಆಮದು ಸುಂಕ ಹೇರಿಕೆ ಕ್ರಮದಿಂದ ಬ್ರಿಟನ್‌, ಚೀನ ಮೇಲೆ ಮಾತ್ರವಲ್ಲದೆ ಸ್ವತಃ ಅಮೆರಿಕದ ಆರ್ಥಿಕತೆಯ ಮೇಲೂ ದುಷ್ಪರಿಣಾಮವಾಗುತ್ತದೆ. ಏಕೆಂದರೆ ಅಮೆರಿಕದ ಉತ್ಪಾದನೆ ಮತ್ತು ನಿರ್ಮಾಣ ರಂಗವು ಉಕ್ಕು ಮತ್ತು ಅಲ್ಯುಮಿನಿಯಂ ಅನ್ನು ಬೃಹತ್‌ ಪ್ರಮಾಣದಲ್ಲಿ ಬಳಸುತ್ತವೆ ಎಂದು ಐಎಂಎಫ್ ವಕ್ತಾರ ಜೆರಿ ರೈಸ್‌ ಹೇಳಿದರು. 

ಅಮೆರಿಕ ಮತ್ತು ಅದರ ವಾಣಿಜ್ಯ ಪಾಲುದಾರ ದೇಶಗಳು ಜತೆಗೂಡಿ ತಮ್ಮೊಳಗಿನ ವಾಣಿಜ್ಯ ಅಡೆತಡೆಗಳನ್ನು ರಚನಾತ್ಮಕವಾಗಿ ನಿವಾರಿಸಿಕೊಳ್ಳುವುದನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಈ ಬಗೆಯ ಯಾವುದೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ವಿನಂತಿಸುತ್ತೇವೆ ಎಂದು ಐಎಂಎಫ್ ವಕ್ತಾರ ಹೇಳಿದರು.  

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next