Advertisement

RBI ಬಗ್ಗೆ IMF ಆಕ್ಷೇಪ: ವರದಿ ಬಗ್ಗೆ ಕೇಂದ್ರ ಸರಕಾರ ಅತೃಪ್ತಿ

11:34 PM Dec 19, 2023 | Team Udayavani |

ವಾಷಿಂಗ್ಟನ್‌: ದೇಶದ ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ಆರ್‌ಬಿಐ ಅಗತ್ಯಕ್ಕಿಂತ ಹೆಚ್ಚು ಮಧ್ಯಪ್ರವೇಶ ಮಾಡಿದೆ. ಇದರಿಂದಾಗಿ ರೂಪಾಯಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬ ಐಎಂಎಫ್ನ ವರದಿಗೆ ಕೇಂದ್ರ ಸರಕಾರ ಆಕ್ರೋಶ ವ್ಯಕ್ತಪಡಿಸಿದೆ. 2022ರ ಡಿಸೆಂಬರ್‌ನಿಂದ ಪ್ರಸಕ್ತ ವರ್ಷದ ಅಕ್ಟೋಬರ್‌ವರೆಗೆ ಅಮೆರಿಕದ ಡಾಲರ್‌ ಎದುರು ಶೇ.2 ಪ್ರಮಾಣದಲ್ಲಿ ದುರ್ಬಲವಾಗಿತ್ತು.

Advertisement

ಅದಕ್ಕಿಂತ ಮೊದಲು ಒಂದು ವರ್ಷ ಕಾಲ ಶೇ.8 ಪ್ರಮಾಣದಲ್ಲಿ ಡಾಲರ್‌ ಎದುರು ಕುಸಿತ ಅನುಭವಿಸಿತ್ತು. ಐಎಂಎಫ್ “ತನ್ನ ಆಯ್ಕೆ”ಯ ಅಂಶಗಳನ್ನು ಪರಿಗಣಿಸಿ ತೀರ್ಮಾನಕ್ಕೆ ಬರುತ್ತದೆ. ಇದೊಂದು ತಪ್ಪು ಅಭಿಪ್ರಾಯದಿಂದ ಕೂಡಿದ ವರದಿ ಎಂದು ಆರ್‌ಬಿಐ ಭಾವಿಸುತ್ತದೆ ಎಂದು ಹೇಳಿದೆ. ರೂಪಾಯಿಯ ಮೌಲ್ಯವನ್ನು ಆರ್‌ಬಿಐ ನಿರ್ಧರಿಸುವುದಿಲ್ಲ. ಆದರೆ ಮಾರುಕಟ್ಟೆ ಏರಿಳಿಕೆಯಿಂದ ಉಂಟಾದ ಮಾತ್ರ ಮಧ್ಯಪ್ರವೇಶಿಸುತ್ತದೆ ಎಂದೂ ಹೇಳಿದೆ. ಇದೇ ವೇಳೆ, ಭಾರ ತವು ಈಗ ಆರ್ಥಿಕತೆಯಲ್ಲಿ ಸ್ಟಾರ್‌ ಪರ್ಫಾರ್ಮರ್‌ ಎಂದೂ ಹೊಗಳಿರುವ ಐಎಂಎಫ್, ಜಾಗತಿಕ ಪ್ರಗತಿಯಲ್ಲಿ ಭಾರತ ಶೇ.16ಕ್ಕಿಂತಲೂ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next