Advertisement

ದೇಶದ ಜಿಡಿಪಿ ನಿರೀಕ್ಷೆ ಶೇ.6.8ಕ್ಕೆ ಇಳಿಸಿದ ಐಎಂಎಫ್

09:01 PM Oct 11, 2022 | |

ನವದೆಹಲಿ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಪ್ರಗತಿ ದರವನ್ನು ಶೇ.6.8ಕ್ಕೆ ಇಳಿಕೆ ಮಾಡಿದೆ.

Advertisement

ಜುಲೈನಲ್ಲಿ ಪ್ರಕಟಿಸಿದ್ದ ಮುನ್ಸೂಚನಾ ವರದಿ ಪ್ರಕಾರ ಜಿಡಿಪಿ ಶೇ.7.8ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು. ಮಂಗಳವಾರ ಜಗತ್ತಿನ ಅರ್ಥ ವ್ಯವಸ್ಥೆಯ ಬೆಳವಣಿಗೆ ಬಗ್ಗೆ ಬಿಡುಗಡೆ ಮಾಡಲಾಗಿರುವ ವರದಿಯಲ್ಲಿ ಇದನ್ನು ಶೇ.6.8 ಎಂದು ಅಂದಾಜಿಸಲಾಗಿದೆ.

ಮುಂದಿನ ವರ್ಷಕ್ಕೆ ಸಂಬಂಧಿಸಿ ಶೇ.6.1ರ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದೂ ಅದು ಅಭಿಪ್ರಾಯಪಟ್ಟಿದೆ. 2021-22ನೇ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.8.7ರ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿತ್ತು.ಹೊಸ ವರದಿಯ ಪ್ರಕಾರ ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ರಗತಿ ಸಾಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ.

ಜಗತ್ತಿನ ಆರ್ಥಿಕ ಪ್ರಗತಿ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿರುವ ಪ್ರಕಾರ ಶೇ.6.1ರಿಂದ (2021ರ ಲೆಕ್ಕಾಚಾರ) ಪ್ರಸಕ್ತ ವರ್ಷ ಶೇ.3.2ಕ್ಕೆ ಇಳಿಕೆಯಾಗಿದೆ. 2023ರ ವೇಳೆಗೆ ಆರ್ಥಿಕ ಪ್ರಗತಿ ಶೇ.2.7ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next