Advertisement
ಏನಿದು ಐ2ಯು2?– ಇದು ನಾಲ್ಕು ದೇಶಗಳ ಕೂಟ. ಭಾರತ, ಇಸ್ರೇಲ್, ಅಮೆರಿಕ, ಯುಎಇ ಇದರ ಸದಸ್ಯರು.
-ಪ್ರಧಾನ ಗುರಿ: ತಂತ್ರಜ್ಞಾನ ಮತ್ತು ಖಾಸಗಿ ರಂಗದಲ್ಲಿ ಪರಸ್ಪರ ಭಾಗೀದಾರಿಕೆ ಹೆಚ್ಚಿಸಿ ಸವಾಲುಗಳನ್ನು ಜತೆಗೂಡಿ ಎದುರಿಸುವುದು.
– 2022ರ ಜುಲೈಯಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಪರಸ್ಪರ ಸಹಕಾರ, ಭಾಗೀದಾರಿಕೆಯ 6 ಪ್ರಮುಖ ಕ್ಷೇತ್ರಗಳ ಘೋಷಣೆ: ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ, ಆಹಾರ ಭದ್ರತೆ.
ಐ2ಯು2 ವೇದಿಕೆಯ ಚರ್ಚೆ, ಸಮಾಲೋಚನೆಯ ಸಂದರ್ಭದಲ್ಲಿಯೇ ಐಎಂಇಸಿಗೆ ಬೀಜಾಂಕುರವಾಯಿತು. ಇದಕ್ಕಾಗಿ ಸೌದಿ ಅರೇಬಿಯಾವನ್ನು ವೇದಿಕೆಯ
ಸದಸ್ಯನನ್ನಾಗಿ ಮಾಡಲಾಯಿತು. ಇದು ಅವಸರದ ಅಡುಗೆಯಲ್ಲ!
2021ರ ಅಕ್ಟೋಬರ್‌ನಲ್ಲಿಯೇ ಇದಕ್ಕಾಗಿ ಐ2ಯು2 ಎಂಬ ವೇದಿಕೆ ಸ್ಥಾಪಿಸಲಾಗಿತ್ತು.
ಭಾರತ, ಇಸ್ರೇಲ್, ಯುಎಇ, ಅಮೆರಿಕದ ಜತೆಗೆ ಸೌದಿ ಅರೇಬಿಯ ಇತ್ತೀಚಿನ ಸೇರ್ಪಡೆ.
ಈ ಮಹಾ ಯೋಜನೆ ಬೀಜಾಂಕುರವಾಗಲು ಕಾರಣ ರಾಷ್ಟ್ರೀಯ ಭದ್ರತಾ ಸಲಹೆಗಾರ
(ಎನ್‌ಎಸ್‌ಎ) ಅಜಿತ್ ದೋವಲ್.
ಇತರ ದೇಶಗಳ ಎನ್‌ಎಸ್‌ಎಗಳ ಜತೆಗೆ ಹಲವು ತಿಂಗಳುಗಳಿಂದ ದೋವಲ್ ಹಲವಾರು ಸುತ್ತುಗಳ ಸಭೆ ನಡೆಸಿದ್ದರು.
ವಿಶೇಷವಾಗಿ ಅಮೆರಿಕದ ಎನ್‌ಎಸ್‌ಎ ಜೇಕ್ ಸುಲಿವನ್ ಜತೆಗೆ ಪಟ್ಟು ಬಿಡದೆ ಕುಳಿತು ಯೋಜನೆಯನ್ನು ಅಂತಿಮಗೊಳಿಸಿದ್ದರು.
Related Articles
– ಚೀನವು ಮಧ್ಯಪ್ರಾಚ್ಯದಲ್ಲಿ ಅದರಲ್ಲೂ ವಿಶೇಷವಾಗಿ ಇರಾಕ್ ಜತೆಗಿನ ಬಾಂಧವ್ಯ ಗಾಢವಾಗುತ್ತಿದೆ. ಬಿಆರ್‌ಐ ಯೋಜನೆಗಾಗಿ ಈ ಸಹಕಾರ ವಿಸ್ತರಣೆಯಾಗಿದೆ.
-ಪರ್ಶಿಯನ್ ಕೊಲ್ಲಿಯ ಮೂಲಕ ವ್ಯಾಪಾರವನ್ನು ವಿಸ್ತರಿಸಲು ಚೀನಕ್ಕೆ ಇರಾಕ್‌ನ ಸಹಕಾರ ಬೇಕು.
-ತನ್ನ ಇಂಧನ-ಶಕ್ತಿಯ ಬೇಡಿಕೆಯನ್ನು ಪೂರೈಸಿಕೊಳ್ಳಲು ಚೀನವು ಪಶ್ಚಿಮ ಏಷ್ಯಾದ ದೇಶಗಳನ್ನು ವ್ಯಾಪಿಸಿಕೊಳ್ಳಲು ಯತ್ನಿಸುತ್ತಿದೆ.
-ಸೌದಿ ಅರೇಬಿಯಾ-ಇರಾನ್ ಒಪ್ಪಂದವನ್ನೇ ಅಡಿಪಾಯವಾಗಿಸಿ ಪಶ್ಚಿಮ ಏಷ್ಯಾ- ಉತ್ತರ ಆಫ್ರಿಕದವರೆಗೂ ವ್ಯಾಪಿಸಿಕೊಳ್ಳಲು ಚೀನ ಚಿಂತನೆ.
– ಇರಾನ್-ಸೌದಿ ಅರೇಬಿಯಾ ಒಪ್ಪಂದದ ಬಳಿಕ ಈ ಭಾಗದ ದೇಶಗಳಿಗೆ ಚೀನದ ನಾಯಕರು, ಅಧಿಕಾರಿಗಳಿಂದ ನಿರಂತರ ಭೇಟಿ.
– ಚೀನ ಹಾರ್ಬರ್ ಎಂಜಿನಿಯರಿಂಗ್ ಕಂಪೆನಿ
(ಸಿಎಚ್‌ಇಸಿ) ಇತ್ತೀಚೆಗೆ 2,100 ಕೋಟಿ ಡಾಲರ್ ಮೊತ್ತದ ಮೂಲಸೌಕರ್ಯ ನಿರ್ಮಾಣ ಯೋಜ ನೆಯೊಂದನ್ನು ನೀಡಲಾಗಿದೆ ಎಂಬ ವರದಿಗಳಿವೆ.
Advertisement
ತಿರುಗೇಟು ಮಾತ್ರ ಅಲ್ಲ-ಐ2ಯು2 ಸದಸ್ಯ ದೇಶಗಳಲ್ಲದೇ ಮಧ್ಯ ಪ್ರಾಚ್ಯದ ಇತರ ದೇಶಗಳಲ್ಲೂ ವ್ಯವಹಾರ ವೃದ್ಧಿ. ಮೂಲಸೌಕರ್ಯ ನಿರ್ಮಾಣದಲ್ಲಿ ಪಾಲುದಾರಿಕೆ ಲಭ್ಯವಾಗುವ ಸಾಧ್ಯತೆ.
-ಈ ಯೋಜನೆಗಳಲ್ಲಿ ಭಾರತ ಪಾಲ್ಗೊಂಡರೆ ಜಾಗತಿಕ ಮೂಲಸೌಕರ್ಯ ನಿರ್ಮಾತೃ ಎಂಬ ಹೆಗ್ಗಳಿಕೆ ಲಭ್ಯ. ಚೀನಕ್ಕೆ ಸಡ್ಡು
– ಯಾವುದೇ ನಾಯಕರು ಹೆಸರೆತ್ತದೇ ಇದ್ದರೂ ಐ2ಯು2 ರಚನೆಯಾದುದು ಮಧ್ಯಪ್ರಾಚ್ಯದಲ್ಲಿ ವಿಸ್ತರಿಸುತ್ತಿರುವ ಚೀನದ ಪ್ರಭಾವಕ್ಕೆ ತಿರುಗೇಟು ನೀಡಲೆಂದೇ.
– ಈ ಯೋಜನೆಯ ತಯಾರಿಯಲ್ಲಿ ನಿಕಟವಾಗಿ ಪಾಲ್ಗೊಂಡಿರುವ ಇಸ್ರೇಲ್‌ನ ಉನ್ನತ ಅಧಿಕಾರಿಯೊಬ್ಬರು ಅಮೆರಿಕದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವಂತೆ – “ಯಾರೂ ತುಟಿ ಬಿಚ್ಚದೆ ಇದ್ದರೂ ಈ ವೇದಿಕೆ, ಯೋಜನೆಯ ಗುರಿ ಚೀನವೇ’. – ಗಮನಾರ್ಹ ವಿಷಯ ಎಂದರೆ ಈ ಯೋಜನೆಯನ್ನು ಐ2ಯು2 ವೇದಿಕೆಯ ಸಭೆಗಳಲ್ಲಿ ಮೊದಲ ಬಾರಿಗೆ ಪ್ರಸ್ತಾವಿಸಿದ್ದು ಇಸ್ರೇಲ್.
– ಇಂತಹ ಬೃಹತ್ ಯೋಜನೆಗಳ, ವಿಶೇಷವಾಗಿ ರೈಲ್ವೇ ಯೋಜನೆಗಳ ಅನುಷ್ಠಾನದಲ್ಲಿ ಭಾರತಕ್ಕೆ ಇರುವ ಸಾಮರ್ಥ್ಯವನ್ನು ಬಳಸಲು ತೀರ್ಮಾನ. ಚಾರು