Advertisement

IMD; ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷೆ

02:13 AM Jul 02, 2024 | Team Udayavani |

ಹೊಸದಿಲ್ಲಿ: ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ, ಜೂನ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಶೇ.11ರಷ್ಟು ಮಳೆ ಕೊರತೆಯಾಗಿದೆ. ಇದು 5 ವರ್ಷದಲ್ಲೇ ಗರಿಷ್ಠ ಕೊರತೆ ಎಂದು ತಿಳಿಸಿದರು. ಜೂನ್‌ನಲ್ಲಿ ವಾಡಿಕೆಯಂತೆ 165.3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 147.2 ಮಿ.ಮೀ. ಮಳೆಯಾಗಿದೆ ಎಂದು ಅವರು ತಿಳಿಸಿದರು.

ಜುಲೈ ತಿಂಗಳಲ್ಲಿ ದೀರ್ಘಾವಧಿಯ ಸರಾಸರಿ 20.04 ಸೆಂ.ಮೀ.ನ ಶೇ.106 ರಷ್ಟು ಹೆಚ್ಚು ಮಳೆಯಾಗಬಹುದು ಎಂದು ಐಎಂಡಿ ಮುಖ್ಯಸ್ಥರು ಹೇಳಿದರು. ದೇಶದ ಎಲ್ಲ ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹು ದಾಗಿದೆ. ಹೀಗಿದ್ದಾಗ್ಯೂ, ಈಶಾನ್ಯ ಭಾರತ ಹಾಗೂ ವಾಯವ್ಯ, ಪೂರ್ವ ಮತ್ತು ನೈಋತ್ಯ ಭಾಗದ ಕೆಲವಡೆ ಮಳೆ ಕೊರತೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next