Advertisement

ಸರಯೂ ಸಪ್ತಾಹದಲ್ಲಿ ಚಿತ್ರಸಂಪುಟ

04:09 PM Jul 07, 2017 | |

ಹವ್ಯಾಸಿ ಯಕ್ಷಗಾನ ಕಲಾವಿದರಲ್ಲೊಬ್ಬರಾದ ಮಧುಸೂದನ ಅಲೆವೂರಾಯರು ವೃತ್ತಿಯಲ್ಲಿ ಲೆಕ್ಕಪರಿಶೋಧಕರು. ವರ್ಕಾಡಿಯ ಲಕ್ಷ್ಮೀನಾರಾಯಣ- ಶ್ರೀದೇವಿ ದಂಪತಿಯ ಪುತ್ರನಾಗಿ ಜನಿಸಿ, ದೂರದ ಬಳ್ಳಾರಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ ಮಂಗಳೂರಿನಲ್ಲಿ ವೃತ್ತಿ ಬದುಕನ್ನು ನಡೆಸುತ್ತಿದ್ದಾರೆ. ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿ, ಇಂದು ಹವ್ಯಾಸಿ ಯಕ್ಷರಂಗದ ಅನಿವಾರ್ಯ ಕಲಾವಿದರೂ ಆಗಿ ರೂಪುಗೊಂಡಿದ್ದಾರೆ. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಹಿಮ್ಮೇಳ ವಿಭಾಗವನ್ನು ಅಭ್ಯಸಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಸರಯೂ ಮಕ್ಕಳ ಮೇಳದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, ಆ ಮೇಳದ ಖಾಯಂ ಹಿಮ್ಮೇಳ ಕಲಾವಿದರೂ ಹೌದು.

Advertisement

ಯಕ್ಷಗಾನವನ್ನು ಬಹುವಾಗಿ ಪ್ರೀತಿಸುವ ಇವರು ಯಕ್ಷಗಾನದ ಛಾಯಾಚಿತ್ರ ಗ್ರಹಣ ಹಾಗೂ ಚಿತ್ರೀಕರಣಗಳೆರಡರಲ್ಲೂ ಎತ್ತಿದ ಕೈ. ಹಿರಿಯ ಕಲಾವಿದರಿಂದ ಆರಂಭಿಸಿ ಇತ್ತೀಚಿನ ಕಿರಿಯ ಕಲಾವಿದರವರೆಗೂ ವೇಷದ ಚಿತ್ರಗಳು, ವೀಡಿಯೋಗಳು ಸದಾ ಇವರಲ್ಲಿ ಲಭ್ಯ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಉತ್ತಮ ಸೇವಾ ಕೈಂಕರ್ಯ ಇವರಿಂದ ಯಕ್ಷರಂಗಕ್ಕೆ ದೊರೆತಿದೆ-ದೊರೆಯುತ್ತಿದೆ.

ಇವರ ಅಪರೂಪದ ಯಕ್ಷಚಿತ್ರಗಳ ಒಂದು ವಿಶೇಷ ಕೃತಿಯನ್ನು ಸರಯೂ ಸಪ್ತಾಹದಲ್ಲಿ (ಜುಲೈ 17ರಿಂದ 23, 2017) ಹೊರತರಲು ಸಂಸ್ಥೆ ನಿರ್ಧರಿಸಿದೆ. “ಮಧುಛಾಯಾ’ ಎಂಬ ಹೆಸರುಳ್ಳ ಈ ಕೃತಿಯಲ್ಲಿ ಸಂಗ್ರಹ ಯೋಗ್ಯ ಛಾಯಾಚಿತ್ರಗಳು ಮತ್ತು ಅನುಭವೀ ಲೇಖಕರ ಯಕ್ಷಲೇಖನಗಳೂ ಇವೆ. ಸರಯೂ ಸಪ್ತಾಹದ ಸಮಾರೋಪದ ದಿನ ನಡೆಯಲಿರುವ ಈ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಅವರಿಗೆ ಸಾರ್ವಜನಿಕ ಸಮ್ಮಾನವೂ ನಡೆಯಲಿದೆ. 

ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next