Advertisement

ಐಎಂಎ ಕೇಸ್‌; ಬೇಗ್‌ ಜತೆಗೆ ಜಮೀರ್‌ಗೂ ನೋಟಿಸ್‌

11:08 PM Jul 24, 2019 | Lakshmi GovindaRaj |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 29ರಂದು ವಿಚಾರಣೆಗೆ ಹಾಜರಾಗುವಂತೆ ಶಾಸಕರಾದ ರೋಷನ್ ಬೇಗ್‌ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೋಷನ್ ಬೇಗ್‌ ಅವರನ್ನು ಎಸ್‌ಐಟಿ ಎರಡು ಬಾರಿ ವಿಚಾರಣೆಗೊಳಪಡಿಸಿದೆ. ಇದೇ ಮೊದಲ ಬಾರಿಗೆ ಜಮೀರ್‌ ಅಹ್ಮದ್‌ಗೂ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದೆ.

Advertisement

ಐಎಂಎ ಮಾಲೀಕ ಮನ್ಸೂರ್‌ ಖಾನ್‌, ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್‌ ಹಣ ಪಡೆದುಕೊಂಡು ವಾಪಾಸ್‌ ನೀಡಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದ. ಜಮೀರ್‌ ಅಹ್ಮದ್‌ ಐಎಂಎಗೆ ನಿವೇಶನ ಮಾರಾಟ ಮಾಡಿದ ಸಲುವಾಗಿ ಐದು ಕೋಟಿ ರೂ. ಹಣ ಪಡೆದಿದ್ದ ಕುರಿತು ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಗೊಂಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ ಜಮೀರ್‌ರನ್ನು ವಿಚಾರಣೆ ನಡೆಸಿದೆ.

ಐಎಂಎ ಅಡಿಟರ್‌ ಬಂಧನ: ಐಎಂಎ ಲೆಕ್ಕಪರಿಶೋಧಕರಾಗಿದ್ದ ಇಕ್ಬಾಲ್‌ ಖಾನ್‌ (27) ಎಂಬುವವರನ್ನು ಎಸ್‌ಐಟಿ ಬಂಧಿಸಿದೆ. ಇಕ್ಬಾಲ್‌ ಖಾನ್‌ ಐಎಂಎ ಕಂಪೆನಿಯ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ, ನೋಂದಣಿ ಇಲಾಖೆ ಸೇರಿದಂತೆ ಇತರೆ ಸಕ್ಷಮ ಪ್ರಾಧಿಕಾರಗಳಿಗೆ ಸುಳ್ಳು ಅಂಕಿ- ಅಂಶಗಳನ್ನು ನೀಡಿ ಕಂಪನಿ ಲಾಭದಲ್ಲಿದೆ ಎಂದು ಬಿಂಬಿಸಿದ್ದ. ಆರೋಪಿಯ ವಿಚಾರಣೆ ಮುಂದುವರಿದಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next