Advertisement

ನನ್ನಿಂದ ತಪ್ಪಾಗಿದೆ, ಕ್ಷಮಿಸಿ: ನಿವೇದಿತಾ ಗೌಡ

06:15 AM Aug 02, 2018 | |

ಮೈಸೂರು: “ನನ್ನಿಂದ ಗೊತ್ತಿಲ್ಲದೆ ಈ ತಪ್ಪಾಗಿದೆ. ದಯವಿಟ್ಟು, ಇದನ್ನು ಇಲ್ಲಿಗೇ ಬಿಟ್ಟು ಬಿಡಿ’ ಎಂದು ಕಿಕಿ
ನೃತ್ಯದಿಂದ ವಿವಾದಕ್ಕೆ ಸಿಲುಕಿರುವ ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದಾರೆ. “ನಾನು ಯಾರಿಗೂ
ಚಾಲೆಂಜ್‌ ಮಾಡಲು ಈ ರೀತಿಯ ಡ್ಯಾನ್ಸ್‌ ಮಾಡಲಿಲ್ಲ.

Advertisement

ಸೋಷಿಯಲ್‌ ಮೀಡಿಯಾದಲ್ಲಿನ ಗ್ಲೋಬಲ್‌ ಚಾಲೆಂಜ್‌ ನೋಡಿ ಹಾಗೆ ಮಾಡಿದೆ. ಇನ್ನು ಮುಂದೆ ಸೋಷಿಯಲ್‌
ಮೀಡಿಯಾ ಬಳಸುವಾಗ ಎಚ್ಚರಿಕೆ ವಹಿಸುತ್ತೇನೆ.

ಇದರಿಂದ ಸಾವು-ನೋವು ಉಂಟಾಗಿದೆ ಎಂಬುದೂ ನನಗೆ ಗೊತ್ತಿರಲಿಲ್ಲ. ಗೊತ್ತಾದ ತಕ್ಷಣ ನನ್ನ ವಾಲ್‌ನಿಂದ ಅದನ್ನು
ತೆಗೆದು ಹಾಕಿದ್ದೇನೆ.

ಬಿಗ್‌ಬಾಸ್‌ನಿಂದ ನನಗೆ ಒಳ್ಳೆಯ ಹೆಸರು ಬಂದಿದೆ. ಅದರಲ್ಲೇ ಖುಷಿಯಾಗಿದ್ದೇನೆ. ನನಗೆ ಸಿನಿಮಾದಲ್ಲಿ ನಟಿಸಬೇಕು
ಎಂಬ ಆಸೆ ಕೂಡ ಇಲ್ಲ. ಆದರೆ, ವಿನಾಕಾರಣ ಇದನ್ನು ವಿವಾದ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ
ಹಿಂಸೆಯಾಗುತ್ತಿದೆ. ನನ್ನ ವಿರುದಟಛಿ ಪೊಲೀಸರಿಗೆ ದೂರು ನೀಡಲಾಗಿದೆಯಂತೆ. ದೂರು ನೀಡುವವರು ನನ್ನನ್ನು
ಸಂಪರ್ಕಿಸಿ, ತಿಳಿ ಹೇಳಿದ್ದರೂ ಎಚ್ಚೆತ್ತು ಕೊಳ್ಳುತ್ತಿದ್ದೆ’ ಎಂದಿದ್ದಾರೆ. 

ಈ ಚಾಲೆಂಜ್‌ ಸ್ವೀಕರಿಸುವುದರಿಂದ ಯಾರ್ಯಾರಿಗೋ ತೊಂದರೆಯಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಈ ಒತ್ತಡದಲ್ಲಿ ನಾನೇ ಏನಾದರೂ ತೊಂದರೆ ಮಾಡಿಕೊಂಡರೆ ನೀವು ಹೊಣೆಯಾಗುತ್ತೀರಾ ಎಂದು ಪ್ರಶ್ನಿಸಿದ ಅವರು, “ನನಗೆ ಪೊಲೀಸ್‌ ಸ್ಟೇಷನ್‌,ಕೋರ್ಟ್‌ ಯಾವುದೂ ಗೊತ್ತಿಲ್ಲ. ಈಗ ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ವೇಳೆ ಅವರು ಕಣ್ಣೀರಿಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next