ಉದಯವಾಣಿ ಜತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Advertisement
ನನ್ನ ನಗರದಲ್ಲಿ ಎಷ್ಟೇ ಜನರಿಗೆ ಕೋವಿಡ್ 19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಸಹಆಗುವುದಿಲ್ಲ. ಬದಲಾಗಿ ಭಾರತಕ್ಕೆ ಬರಲು 15 ಗಂಟೆಗಳ ಪ್ರಯಾಣ ಮಾಡಬೇಕು. ಮಾರ್ಗ ಮಧ್ಯೆ ಹಲವರಿಗೆ ಸೋಂಕು ತಗುಲಲೂ ಬಹುದು. ಹಾಗಾಗಿ ನನ್ನ ದೇಶಕ್ಕೆ ಕೋವಿಡ್ 19ನ್ನು ಹೊತ್ತೂಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ ಅವರು.
ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಯಾವುದೇ ಕಾರಣಕ್ಕೆ ನಿಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ. ಬಸ್, ರೈಲು ಹತ್ತಿ ಮನೆಗೆ ಹೋಗು
ವುದರಿಂದ ಕೋವಿಡ್ 19 ಸೋಂಕು ಹರಡಬಹುದು. ನಿಮಗೆ ಸೋಂಕು ಇದ್ದರೆ ಸಹಪ್ರಯಾಣಿಕರಿಗೂ ಹರಡುವ ಸಾಧ್ಯತೆ ಹೆಚ್ಚು. ಸರಕಾರ ಮುಂಜಾಗ್ರತಾ ಕ್ರಮವಾಗಿ ಬಸ್‌ಗಳನ್ನ ಬಂದ್ ಮಾಡಿದರೂ ಕಷ್ಟ ಪಟ್ಟು ಇನ್ಯಾವುದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇದ್ದು ಬಿಡಿ’ ಎಂದು ಮನವಿ ಮಾಡಿದ್ದಾರೆ ಅವರು.