ನಂಜನಗೂಡು: ನಾನು ಕೂಡ ದೂಡ ಕೌಲಂದೆ ಗ್ರಾಮದವನು. ಈ ಶಾಲೆಗೆ ಯಾವ ರೀತಿಯ ಸಹಾಕರ ಬೇಕಾದರೂ ನೀಡಲು ನಾನು ಸದ ಸಿದ್ದ ಎಂದು ಶಾಸಕ ದರ್ಶನ್ ದೃವನಾರಾಯಣ್ ತಿಳಿಸಿದರು.
ಅವರು ನಂಜನಗೂಡು ತಾಲೂಕಿನ ದೂಡ ಕೌಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡ ಶಾಲಾ ವಿಭಾಗದ) ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ಮಾತನಾಡಿದ ಅವರು, ನಾನು ಕೂಡ ಈ ಗ್ರಾಮವದನೇ, ಪಕ್ಕದ ಗ್ರಾಮ ಹೆಗ್ಗವಾಡಿ ಗ್ರಾಮದವನು. ಕೌಲಂದೆ ಗ್ರಾಮದ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದು ನನ್ನ ಗುರಿ. ಶಾಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ಸಮಯದಲ್ಲಿ ಬೇಕಾದರೂ ನೀವು ನನ್ನನ್ನು ಭೇಟಿ ನೀಡಬಹುದು. ನನ್ನ ಸಂಪೂರ್ಣ ಸಹಕಾರ ನಿಮಗೆ ಸಿಗುತ್ತದೆ ಎಂದರು.
ಈ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ವರ್ಗಾವಣೆ ವಿಷಯ ತಿಳಿದ ತಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಿ ವರ್ಗಾವಣೆ ತಡೆ ಹಿಡಿಯಲಾಗಿದೆ. ಯಾವುದಕ್ಕೂ ಅತಂಕಪಡುವುದು ಬೇಡ ಎಂದರು.
ಗ್ರಾ.ಪಂ. ಅಧ್ಯಕ್ಷ ಜ್ಯೋತಿ ವೆಂಕಟೇಶ್ ಮಾತಾನಾಡಿ, ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ದೂಡ ಕೌಲಂದೆ ಗ್ರಾಮವನ್ನು ನಂಜನಗೂಡಿನಲ್ಲಿ ಜನಪ್ರಿಯತೆಗೂಳಿಸುವಂತೆ ಮಾಡಬೇಕು. ಗ್ರಾ.ಪಂ. ಕಡೆಯಿಂದ ಯಾವ ಸಲಹೆ, ಸಹಕಾರ ಬೇಕಾದರೂ ನಾವು ನೀಡುತ್ತೆವೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಉಪಾಧ್ಯಕ್ಷ ಪ್ರಶಾಂತ ಕುಮಾರ್, ಗ್ರಾ. ಪಂ ಸದಸ್ಯರುಗಳಾದ ಸಿದ್ದಲಿಂಗಪ್ಪ, ಶಂಕರ್ ನಾಯಕ, ನವೀನ, ಮಂಜು, ಗುರುಪ್ಪದಪ ಸ್ವಾಮಿ, ಟಿ.ಎನ್. ಕೃಷ್ಣ, ರಾಹುಲ್, ಜಿ ಸುರೇಶ್, ಮುಜಮಿಲ್, ಪಯಾಜ್ ಅಹಮದ್ ನಜೀಹುಲಾಖಾನ್, ಶಾಲೆಯ ಮುಖ್ಯಗುರು, ರಘು ಟಿ.ಎನ್., ರವಿ ಕುಮಾರ್, ಕೆಂಪರಾಜು, ಮಧುಶ್ರೀ ಹಾಗೂ ಇತರರು ಹಾಜರಿದ್ದರು.