Advertisement

ನಡಾಲ್‌ಗೆ ಕೋವಿಡ್: ಆಸ್ಟ್ರೇಲಿಯನ್‌ ಓಪನ್‌ಗೆ ಅನುಮಾನ

09:01 PM Dec 20, 2021 | Team Udayavani |

ಮ್ಯಾಡ್ರಿಡ್‌: ಸ್ಪೇನಿನ ಟೆನಿಸಿಗ ರಫಾಯೆಲ್‌ ನಡಾಲ್‌ ಅವರಿಗೆ ಕೋವಿಡ್ ದೃಢಪಟ್ಟಿದೆ. ಅಬುಧಾಬಿಯಲ್ಲಿ ಪ್ರದರ್ಶನ ಪಂದ್ಯವೊಂದನ್ನು ಆಡಿದ ಬಳಿಕ ಧನಾತ್ಮಕ ಫ‌ಲಿತಾಂಶ ಕಾಣಿಸಿಕೊಂಡಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Advertisement

ಇದರಿಂದ ಅವರು ಮುಂದಿನ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಆಡುವುದು ಅನುಮಾನವೆನಿಸಿದೆ. 4 ತಿಂಗಳ ಬಳಿಕ ನಡಾಲ್‌ ಕಣಕ್ಕಿಳಿದಿದ್ದರು.

ಶುಕ್ರವಾರ ಅಬುಧಾಬಿಯಲ್ಲಿ ಇವರ ಎದುರಾಳಿಯಾಗಿ ಕಾಣಿಸಿಕೊಂಡವರು ಆ್ಯಂಡಿ ಮರ್ರೆ. ಇದನ್ನು ನೇರ ಸೆಟ್‌ಗಳಲ್ಲಿ ಸೋತು ಸ್ಪೇನ್‌ಗೆ ವಿಮಾನ ಏರಿದ್ದರು. ಅಬುಧಾಬಿಯಿಂದ ಸ್ಪೇನ್‌ಗೆ ಮರಳಿದ ಬಳಿಕ ನಡಾಲ್‌ ಪಿಸಿಆರ್‌ ಟೆಸ್ಟ್‌ಗೆ ಒಳಗಾಗಿದ್ದರು. ಇದರ ಫ‌ಲಿತಾಂಶ ಪಾಸಿಟಿವ್‌ ಬಂದಿದ್ದು, ಅವರೀಗ ಪ್ರತ್ಯೇಕವಾಗಿದ್ದಾರೆ. ಪ್ರತೀ ಎರಡು ದಿನಗಳಿಗೊಮ್ಮೆ ನಾನು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೆ. ಎಲ್ಲದರ ಫ‌ಲಿತಾಂಶವೂ ನೆಗೆಟಿವ್‌ ಬಂದಿತ್ತು. ಆದರೆ ಶನಿವಾರ ನಡೆಸಲಾದ ಕೋವಿಡ್‌ ಟೆಸ್ಟ್‌ ಫ‌ಲಿತಾಂಶ ಪಾಸಿಟಿವ್‌ ಬಂದಿದೆ ಎಂದು ನಡಾಲ್‌ ಹೇಳಿದ್ದಾರೆ.

ಇದನ್ನೂ ಓದಿ:ಹಿಂದಿ ವಿರೋಧಿಸುವವರು, ಉರ್ದು ಬರೆದರೆ ಪ್ರಶ್ನಿಸಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌

Advertisement

Udayavani is now on Telegram. Click here to join our channel and stay updated with the latest news.

Next