Advertisement

ಐಎಂ ಐವರು ಉಗ್ರರು ದೋಷಿಗಳು

11:04 AM May 26, 2018 | Team Udayavani |

ಪಾಟ್ನಾ: ಬಿಹಾರದ ಬೋಧ್‌ಗಯಾದಲ್ಲಿ 2013ರ ಜುಲೈನಲ್ಲಿ ಸಂಭವಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ಕೋರ್ಟ್‌ ಇಂಡಿಯನ್‌ ಮುಜಾಹಿ ದೀನ್‌ ಸಂಘಟನೆಯ 5 ಉಗ್ರರನ್ನು ದೋಷಿಗಳೆಂದು ಘೋಷಿಸಿದೆ.  

Advertisement

ಮೇ 31ರಂದು ಇವರಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ. ಈ ಪ್ರಕರಣದಲ್ಲಿ ಆರನೇ ಅಪರಾಧಿ ತೌಫಿಕ್‌ ಅಹ್ಮದ್‌ ಎಂಬಾತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿ ರುವುದರಿಂದ ಆತನಿಗೆ ಕಳೆದ ವರ್ಷವೇ ಮೂರು ವರ್ಷಗಳ ಕಾಲ ರಿಮಾಂಡ್‌ ಹೋಮ್‌ನಲ್ಲಿ ಇರಿಸುವಂತೆ ಬಾಲಾಪ ರಾಧಿಗಳ ನ್ಯಾಯ ಮಂಡಳಿ ತೀರ್ಪು ನೀಡಿತ್ತು. 2013ರ ಅಕ್ಟೋಬರ್‌ನಲ್ಲಿ ಪಾಟ್ನಾದಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲೂ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next