Advertisement

ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ: ನವಜೋತ್‌ ಸಿಧು

03:45 AM Jan 17, 2017 | Team Udayavani |

ನವದೆಹಲಿ: ಭಾನುವಾರವಷ್ಟೇ ಕಾಂಗ್ರೆಸ್‌ ಸೇರಿರುವ ಮಾಜಿ ಬಿಜೆಪಿ ಸಂಸದ ನವಜೋತ್‌ ಸಿಂಗ್‌ ಸಿಧು, ತಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ ಎಂದು ಹೇಳಿಕೊಂಡಿದ್ದಾರೆ.

Advertisement

ಎಐಸಿಸಿ ಕಚೇರಿಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತನ್ನ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು 40 ವರ್ಷ ಕಾಂಗ್ರೆಸ್ಸಿಗಾಗಿ ಹೋರಾಡಿದ್ದರು. ಇದೀಗ ನಾನು ಮತ್ತೆ ಬೇರುನೆಲಕ್ಕೆ ಮರಳಿದ್ದೇನೆ. ಕಾಂಗ್ರೆಸ್‌ನ ಅಗ್ರ ನಾಯಕತ್ವ ನಿಯೋಜಿಸುವ ಯಾವುದೇ ನಾಯಕತ್ವದಡಿ ಕೆಲಸ ಮಾಡಲು ತಾನು ಸಿದ್ಧ ಎಂದು ಅವರು ಹೇಳಿಕೊಂಡರು.

“ನಿಮಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಆಸಕ್ತಿಯಿದೆಯೇ’ ಎಂಬ ಪ್ರಶ್ನೆಗೆ ಸಿಧು ನೇರವಾಗಿ ಉತ್ತರಿಸದೇ ನುಣುಚಿಕೊಂಡರು.

“ರಾಜಕೀಯದಲ್ಲಿ ಒಂದು ವೇಳೆ, ಆದರೆ ಎಂಬ ಪದಗಳಿಲ್ಲ. ಒಂದು ವೇಳೆ ನನ್ನ ಚಿಕ್ಕಮ್ಮನಿಗೆ ಮೀಸೆ ಇದ್ದರೆ ಅವಳನ್ನು ನಾನು ಚಿಕ್ಕಪ್ಪ’ ಎಂದು ಕರೆಯುತ್ತಿದ್ದೆ ಎಂದು ಹೇಳುವ ಮೂಲಕ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸೂಚನೆ ನೀಡಿದರು. 

ಜೊತೆಗೆ ತನಗೆ ಅಮೃತ್‌ಸರದಿಂದ ಬಿಜೆಪಿ ಲೋಕಸಭಾ ಟಿಕೆಟ್‌ ತಪ್ಪಿಸಿದವರನ್ನು ಮಂಥರೆಗೆ ಹೋಲಿಸುವ ಮೂಲಕ ಕಿಡಿಕಾರಿದರು.

Advertisement

ಅಮೃತಸರ ಪೂರ್ವ ಕ್ಷೇತ್ರದಿಂದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹುರಿಯಾಳಾಗಿ ಸಿಧು ಕಣಕ್ಕಿಳಿಯಲಿದ್ದಾರೆ.

ಇಂದಿನಿಂದ ಉತ್ತರಪ್ರದೇಶ  ಚುನಾವಣೆ ಪ್ರಕ್ರಿಯೆ ಶುರು
ಲಕ್ನೋ: ದೇಶದಲ್ಲೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿ ರುವ ಮತ್ತು ಸಾಕಷ್ಟು ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮಂಗಳವಾರದಿಂದ ಅಧಿಕೃತ ಚಾಲನೆ ಸಿಗಲಿದೆ. 

ಫೆ. 11 ರಂದು ನಡೆಯುವ ಮೊದಲ ಹಂತದ 73 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ (ಜ. 17) ದಿಂದ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜ. 24 ಕೊನೆ ದಿನವಾಗಿದ್ದು, ಜ. 27ರೊಳಗೆ ತಮ್ಮ ಉಮೇದುವಾರಿಕೆಗಳನ್ನು ವಾಪಸ್‌ ಪಡೆಯಬಹುದಾಗಿದೆ. ಫೆ. 11 ರಿಂದ ಪ್ರಾರಂಭವಾಗುವ ಮತದಾನ ಪ್ರಕ್ರಿಯೆ ಮಾ. 8 ರವರೆಗೂ 7 ಹಂತಗಳಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next