Advertisement
ಏಳನೆಯ ತರಗತಿಯನ್ನು ಪೆರಿಂಜೆ ಸರಕಾರಿ ಶಾಲೆಯಲ್ಲಿ ಕಲಿತೆ. ಅಲ್ಲಿ ಗ್ರಾಮ ಪಂಚಾಯತಿಯವರು ಬಂದು ಇಬ್ಬರು ಮಕ್ಕಳಿಗೆ ಒಂದು ಗಿಡದಂತೆ ಕೊಡುತ್ತಿದ್ದರು. ಅದನ್ನು ನೆಟ್ಟು ಬೇಲಿ ಹಾಕಲಾಗುತ್ತಿತ್ತು. ಗಿಡವನ್ನು ನೆಟ್ಟ ವಿದ್ಯಾರ್ಥಿಗಳ ಹೆಸರನ್ನು ಅಲ್ಲಿ ಬರೆಯಲಾಗುತ್ತಿತ್ತು. ಅದನ್ನು ಪೋಷಿಸುವ ಜವಾಬ್ದಾರಿ ಆ ವಿದ್ಯಾರ್ಥಿಗಳದು. ಆ ಕೆಲಸವನ್ನು “ನಮ್ಮ ಗಿಡ, ನಮ್ಮ ಗಿಡ’ ಎಂದು ಖುಷಿಯಿಂದ ಮಾಡುತ್ತಿದ್ದೆವು. ಆ ಶಾಲೆ ಬಿಟ್ಟು ಬರುವಾಗ ಗಿಡದ ನೆನಪಿಗಾಗಿ ತೆಗೆದುಕೊಂಡು ಬಂದ ಅದರ ಎಲೆ ಈಗಲೂ ನನ್ನ ಬಳಿ ಇದೆ. ಇದರಿಂದ ನಾವು ಪರಿಸರ ಸ್ನೇಹಿಗಳಾಗಲು ಸಹಾಯವಾಯಿತು.
Related Articles
ವವರಿಗೆ ಅನುಕೂಲವಾಗುತ್ತಿತ್ತು. ತುಂಬಾ ಚೆನ್ನಾಗಿ ಕಲಿಸುತ್ತಿ ದ್ದರು. ಆದರೆ ದೊಡ್ಡ ಶಾಲೆ. ಸಾಗರದ ಹಾಗೆ, ತುಂಬಾ ಮಕ್ಕಳು. ನನಗೆ ಸರಕಾರಿ ಶಾಲೆಯೇ ಒಳ್ಳೆಯದೆನಿಸಿತು. ಆದ್ದರಿಂದ ಒಂಬತ್ತನೆಯ ಕ್ಲಾಸಿಗೆ ಪ್ರಾಂತ್ಯ ಪ್ರೌಢಶಾಲೆಗೆ ಸೇರಿದೆ. ಇಲ್ಲಿಯೂ ಸರಕಾರದಿಂದ ಹಸಿರು ಬಣ್ಣದ ಸಮವಸ್ತ್ರ ಸಿಕ್ಕಿತು. ಚಪ್ಪಲಿ ಕೂಡ ಸಿಕ್ಕಿತು. ಈ ವರ್ಷ ಕರ್ನಾಟಕ ದರ್ಶನಕ್ಕೆ ಕರೆದು ಕೊಂಡು ಹೋಗಿದ್ದರು. ಪ್ರವಾಸಕ್ಕೆ ಬೇರೆ ಬೇರೆ ಶಾಲೆಯ ಮಕ್ಕಳು, ಶಿಕ್ಷಕರು ಬಂದಿದ್ದರು. ಹಲವರೊಂದಿಗೆ ಬೆರೆಯಲು ಆಯಿತು. ಶನಿವಾರದ ದಿನ ನಮಗೆ ಶಿಕ್ಷಕರಿಂದ ಸ್ವತ್ಛತೆಯ ಬಗ್ಗೆ ವಿಶೇಷ ಮಾಹಿತಿ ಸಿಗುತ್ತದೆ. ಬೀದಿ ನಾಟಕಗಳನ್ನು ಮಾಡಿ ಜನರಲ್ಲಿ ನಾವು ಅರಿವು ಮೂಡಿಸಿದ್ದೇವೆ. ಅರಣ್ಯದ ಬಗ್ಗೆ ಅರಣ್ಯಾಧಿಕಾರಿ ಬಂದು ವಿಶೇಷ ಉಪನ್ಯಾಸ ಕೊಟ್ಟಿದ್ದಾರೆ. ಬೆಂಕಿ ಆರಿಸುವ ಬಗ್ಗೆ ಅಗ್ನಿಶಾಮಕ ದಳದವರು ಬಂದು ವಿಶೇಷ ಉಪನ್ಯಾಸ ನೀಡಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ, ಹೊಲಿಗೆ ತರಬೇತಿಗಳಿವೆ.
Advertisement
ನಾನು ಸರಕಾರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ. ಇಂಗ್ಲಿಷನ್ನು ಚೆನ್ನಾಗಿಯೇ ಕಲಿಸುತ್ತಾರೆ. ನಾನು ಸರಕಾರಿ ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವುದರಿಂದ ಏನೋ ನಷ್ಟ ವಾಗಿದೆ ಯೆಂದು ನನಗನಿಸಿಲ್ಲ. ಅತಿಯಾಗಿ ಹೋಂವರ್ಕ್ ಕೊಡುವು ದಿಲ್ಲ. ತಡೆಯಲಾಗದ ಒತ್ತಡವನ್ನೂ ಹಾಕುವುದಿಲ್ಲ. ಮುಂದಿನ ವರ್ಷ ನಾನು ಹತ್ತನೆಯ ತರಗತಿ ಎಂದು ಓದಲು ಒತ್ತಡ ಹಾಕಬಾರದು. ನಾನು ಚೆನ್ನಾಗಿ ಓದಬೇಕೆಂದು ನನಗೆ ಗೊತ್ತಿದೆ, ನಾನೇ ಓದಿಕೊಳ್ಳುತ್ತೇನೆಂದು ಮನೆಯಲ್ಲಿ ಹೇಳಿದ್ದೇನೆ. ನಾನು ಓದಿದ ಶಾಲೆಗಳಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಷ್ಟ ಎಂದು ಬೇಜಾರಲ್ಲಿರುವ ಫ್ರೆಂಡ್ಸ್ಗಳಿದ್ದಾರೆ. ಇತ್ತೀಚೆಗೆ ಒಬ್ಬ ಶಾಲೆ ಬಿಡುತ್ತೇನೆ, ಮನೆಯಲ್ಲಿ ಕಷ್ಟ ಎಂದ. ಅವನನ್ನು ಹೇಗಾದರೂ ಹತ್ತನೆ ಮುಗಿಸು ಎಂದು ಹೇಳಿ ಒಪ್ಪಿಸಿದ್ದೇನೆ. ಆದ್ದರಿಂದ ನಮಗೆ ಸ್ವಾತಂತ್ರ್ಯವಿದೆ. ಕಲಿಕೆಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಕ್ರೀಡೆಗೆ ಯಾವುದಕ್ಕೆ ಬೇಕಾದರೂ ಸೇರಬಹುದು. ಸೇರದೆ ಇರಲು ಸ್ವಾತಂತ್ರ್ಯವೂ ಇದೆ. ಸರಕಾರಿ ಶಾಲೆಯಲ್ಲಿ ನನಗೆ ಸಿಕ್ಕಿದ ಜ್ಞಾನದಿಂದ, ಅನು ಭವಗಳಿಂದ ನಾನು ಚೆನ್ನಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಆದ್ದರಿಂದ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ- ನಾನು ಸರಕಾರಿ ಶಾಲೆಯ ವಿದ್ಯಾರ್ಥಿ. ಅಧ್ಯಯನಾ ಸಿ.ಎ, ಕೊಡಂಗಲ್ಲು, ಮೂಡುಬಿದ್ರೆ