Advertisement
ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಇಲ್ಲಿನ ಅಬ್ಬಿಗೇರಿ ಕಾಂಪೌಂಡ್ ಭಾಗದಲ್ಲಿ ಮೂರು ಟಂಟಂ ವಾಹನಗಳಲ್ಲಿ ಅಕ್ಕಿಯನ್ನು ತರಲಾಗಿತ್ತು. ಈ ಕುರಿತು ಅನುಮಾನಗೊಂಡಸ್ಥಳೀಯರೊಬ್ಬರು ಗದಗ ತಾಪಂ ಇಒ ಡಾ| ಎಚ್.ಎಸ್. ಜಿನಗಾ ಅವರಿಗೆ ಮಾಹಿತಿ ನೀಡಿದ್ದು, ಅವರು ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಅ ಧಿಕಾರಿಗಳ
ಗಮನ ಸೆಳೆದರು. ಬಳಿಕ ಆಹಾರ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಹಾಗೂ ಇತರೆ ಸಿಬ್ಬಂದಿ ದಾಳಿ ನಡೆಸಿ, ಅಕ್ಕಿ ಮೂಟೆ ತುಂಬಿದ್ದ ಎರಡು ಟಂಟಂ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಗೋವಾ ರಾಜ್ಯಕ್ಕೆ ಸಾಗಿಸಲಾಗುತ್ತಿದೆ ಎಂದು ಹೇಳಲಾಗಿದೆ. ನೂರಾರು ಮೂಟೆ ದಾಸ್ತಾನು: ಇದೇ ವೇಳೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಎಂಸಿ ಹಿಂಭಾಗದ ಗೋದಾಮಿನಲ್ಲಿ ನೂರಾರು ಮೂಟೆ ಅನ್ನಭಾಗ್ಯ ಅಕ್ಕಿ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಗೋದಾಮಿನ ಮೇಲೆ ದಾಳಿ ನಡೆಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 50 ಕೆ.ಜಿ. ತೂಕದ 200ಕ್ಕಿಂತ ಹೆಚ್ಚು ಅಕ್ಕಿ ಚೀಲ ವಶಪಡಿಸಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್‌ಪಿ ಯತೀಶ್ ಎನ್. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.