Advertisement
ಕಳೆದ ಎರಡು ದಿನಗಳ ಹಿಂದೆ ತೆರವು ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಂಗಳವಾರವೂ ತೆರವು ಕಾರ್ಯಾಚರಣೆ ಮೂಲಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದರು.ಸಂಜೆ 5 ಗಂಟೆಗೆ ಆರಂಭವಾದ ಕಾರ್ಯಾಚರಣೆ ರಾತ್ರಿ 8ಗಂಟೆವರೆಗೂ ನಡೆಯಿತು. ಸುಮಾರು ಮೂರು ಕಿಮೀದೂರದವರೆಗೂ ತೆರವು ಕಾರ್ಯಾಚರಣೆ ನಡೆಯಿತು.
Related Articles
Advertisement
ಬೀದಿ ವ್ಯಾಪಾರಿಗಳಾಗಿದ್ದು, ಮಾನವೀಯತೆ ದೃಷ್ಟಿಯಿಂದ ಬಿಡುವಂತೆ ಮನವಿ ಮಾಡಿದರು. ಪಾದಚಾರಿ ಮಾರ್ಗ, ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಿದರೆ ಜನರು ಓಡಾಡುವುದುಹೇಗೆ. ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ವಾಹನಗಳು ಸುಗಮವಾಗಿ ಓಡಾಡದಂತಾಗಿದೆ. ಯಾವುದೇಕಾರಣಕ್ಕೂ ವಿನಾಯಿತಿ ನೀಡುವ ಪ್ರಶ್ನೆಯಿಲ್ಲ. ಅಂಗಡಿ ಮಾಲೀಕರು ತಮ್ಮ ಅಂಗಡಿಯೊಳಗೆ ಸಾಮಗ್ರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡಬೇಕು ವಿನಃ ಪಾದಚಾರಿ ಮಾರ್ಗದಲ್ಲಿ ಅಲ್ಲ ಎಂದು ನಿತೇಶ ಪಾಟೀಲ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಅತಿಕ್ರಮಣ ತೆರವು ಎಲ್ಲೆಲ್ಲಿ? :
ಮಾರುಕಟ್ಟೆಯ ಹೃದಯ ಭಾಗವಾಗಿರುವ ದುರ್ಗದ ಬಯಲು, ಶಾ ಬಜಾರ್, ತಬೀಬ್ ಲ್ಯಾಂಡ್ ಮುಖ್ಯ ರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಮಾಡಲಾಯಿತು. ಸುಮಾರು 50-60 ಅಂಗಡಿಗಳ ಮುಂದೆ ಅಕ್ರಮವಾಗಿ ಮೆಟ್ಟಿಲು, ವ್ಯಾಪಾರದ ಸ್ಥಳವನ್ನಾಗಿ ಮಾಡಿಕೊಳ್ಳಲಾಗಿತ್ತು. ಇಂತಹ ಸ್ಥಳಗಳನ್ನು ಗುರುತಿಸಿ ಸರ್ವೇ ಅಧಿಕಾರಿಗಳಿಂದ ಅಳತೆ ಮಾಡಿಸಿ ಒತ್ತುವರಿ ಖಚಿತಪಡಿಸಿಕೊಂಡು ತೆರವುಗೊಳಿಸಲಾಯಿತು. ನಾವೇ ತೆರವುಗೊಳಿಸುತ್ತೇವೆ ಎಂಬ ಮಾಲೀಕರ ಮನವಿ ತಿರಸ್ಕರಿಸಿ ಪಾಲಿಕೆ ಜೆಸಿಬಿಯಿಂದ ಒಡೆದುತೆಗೆಯಲಾಯಿತು.
ಸಾರ್ವಜನಿಕರಿಂದ ಶಹಬ್ಬಾಸ್‌ಗಿರಿ :
ನಗರದ ಪ್ರಮುಖ ಮಾರುಕಟ್ಟೆ ದುರ್ಗದ ಬಯಲು ಸೇರಿದಂತೆ ವಿವಿಧ ರಸ್ತೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆವ್ಯಕ್ತವಾಗಿದೆ. ಒತ್ತುವರಿಯಿಂದ ನಗರದ ವಿವಿಧೆಡೆದೊಡ್ಡ ರಸ್ತೆಗಳು ಕಿರಿದಾಗಿ ದ್ವಿಚಕ್ರ ವಾಹನಗಳೂಓಡಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಬಗ್ಗೆ ಸೂಕ್ತ ಗಮನ ಹರಿಸಬೇಕಾದ ಮಹಾನಗರಪಾಲಿಕೆ ಮೌನಕ್ಕೆ ಶರಣಾಗಿದ್ದರಿಂದ ಈ ಪರಿಸ್ಥಿತಿಉಂಟಾಗಿದೆ. ಒತ್ತುವರಿ ತೆರವು ಕಾರ್ಯ ಒಂದೆರಡು ದಿನಕ್ಕೆ ಸೀಮಿತವಾಗದೆ ಎಲ್ಲಾ ಕಡೆಗೂ ಆಗಬೇಕು. ಅನಧಿಕೃತ ಕಟ್ಟಡಗಳ ತೆರವಿಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಮಾರುಕಟ್ಟೆ ಪ್ರದೇಶಗಳಲ್ಲಿ ಸಾಕಷ್ಟು ಒತ್ತುವರಿಯಾಗಿರುವ ಕುರಿತು ಸಾರ್ವನಿಕರಿಂದ ದೂರು ಬಂದಿದ್ದವು. ಈಗಾಗಲೇ ಅಂತಹಪ್ರದೇಶಗಳನ್ನು ಗುರುತಿಸಿ ಎಚ್ಚರಿಕೆ ಕೂಡನೀಡಲಾಗಿದೆ.ಪಾಲಿಕೆಯ ರಸ್ತೆ, ಪಾದಚಾರಿಮಾರ್ಗಗಳು ಜನರಿಗೆ ಮುಕ್ತವಾಗುವವರೆಗೂ ತೆರವುಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ಒತ್ತುವರಿ ತೆರವು ಕಾರ್ಯಾಚರಣೆ ಆಗಾಗ ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ನಿತೇಶ ಪಾಟೀಲ, ಜಿಲ್ಲಾಧಿಕಾರಿ