Advertisement

Iran: ಅಕ್ರಮ ಸಂಬಂಧ- ಇರಾನ್‌ನಲ್ಲಿ ಮಹಿಳೆಗೆ ಗಲ್ಲು

09:23 PM Nov 03, 2023 | Team Udayavani |

ಟೆಹ್ರಾನ್‌: ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಇರಾನ್‌ನಲ್ಲಿ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಜಿಮ್‌ ಒಂದರಲ್ಲಿ ಮಹಿಳಾ ಟ್ರೇನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ, 2022ರಲ್ಲಿ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದನ್ನು ಆಕೆಯ ಪತಿ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆಹಚ್ಚಿದ್ದ.

Advertisement

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಗೆ ಗಲ್ಲುಶಿಕ್ಷೆ ವಿಧಿಸಿರುವುದಾಗಿ ಅಲ್ಲಿನ ನ್ಯಾಯಾಲಯ ತಿಳಿಸಿದೆ. ಇರಾನ್‌ನಲ್ಲಿ ಮರಣದಂಡನೆಯ ಪ್ರಕರಣಗಳು ತೀವ್ರಗೊಂಡಿದ್ದು, ಈ ವರ್ಷದ ಮೊದಲ 7 ತಿಂಗಳಲ್ಲೇ 419 ಮಂದಿಯನ್ನು ಗಲ್ಲಿಗೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next