Advertisement

ಅಕ್ರಮ ತ್ಯಾಜ್ಯ: ಎರಡು ಲಾರಿ ಪೊಲೀಸ್‌ ವಶಕ್ಕೆ

02:20 AM Jul 19, 2017 | Team Udayavani |

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಹಳೆಯಂಗಡಿಯಲ್ಲಿ ಅಕ್ರಮವಾಗಿ ತ್ಯಾಜ್ಯವನ್ನು ಸುರಿಯುತ್ತಿದ್ದ ಎರಡು ಲಾರಿಗಳನ್ನು  ಹಳೆಯಂಗಡಿ ಗ್ರಾಮ ಪಂಚಾಯತ್‌ ಆಡಳಿತವು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಉದಯವಾಣಿಯ ಸುದಿನದಲ್ಲಿ ಜು. 16ರಂದು ಪ್ರಕಟಗೊಂಡ ವರದಿಯ  ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ 
ಪಿಡಿಒ ಅಬೂಬಕ್ಕರ್‌,  ಕೆಎ 19ಎಂಡಿ 3266 ಹಾಗೂ ಕೆಎ 19 ಡಿ 2735 ನಂಬರಿನ ಲಾರಿಗಳು ತ್ಯಾಜ್ಯವನ್ನು ಸುರಿಯುತ್ತಿದ್ದ ಛಾಯಾಚಿತ್ರವನ್ನು ಸೆರೆಹಿಡಿದು, ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ   ಹಿನ್ನೆಲೆಯಲ್ಲಿ ಅವುಗಳ ವಿರುದ್ಧ ಮೂಲ್ಕಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇಂತಹ ಅಕ್ರಮಗಳನ್ನು ನಡೆಸುತ್ತಿದ್ದಾಗ ಸಾರ್ವಜನಿಕರು ತತ್‌ಕ್ಷಣ ಪಂಚಾಯತ್‌ಗೆ ಮಾಹಿತಿ ನೀಡಬೇಕು ಹಾಗೂ ಹೆದ್ದಾರಿಯ ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸವನ್ನು ಬಿಸಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಜರಗಿಸಲು ಸಹಕಾರ ನೀಡಬೇಕು ಎಂದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ ವಿನಂತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next