Advertisement

ಮಣ್ಣು, ಮರಳು ಅಕ್ರಮ ಸಾಗಣೆ

06:52 AM Jun 17, 2020 | Lakshmi GovindaRaj |

ಟೇಕಲ್‌: ಗ್ರಾಮದ ಈಶ್ವರನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು, ಮರಳು ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂರು ದಿನಗಳಿಂದ ಕೆಲವರು ಏಜೆಂಟರು ಕೆರೆ ಯಲ್ಲಿನ ಮರಳನ್ನು ಮಾಲೂರಿನಲ್ಲಿ ಮಾರುತ್ತಿರು ವುದು ಬೆಳಕಿಗೆ ಬಂದಿತ್ತು.

Advertisement

ಹೀಗಾಗಿ ಟೇಕಲ್‌ ಗ್ರಾಪಂ ಅಧ್ಯಕ್ಷ ಮಂಜುನಾಥ್‌, ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದರು.  ಮಾಹಿತಿ ಆಧಾರದ ಮೇಲೆ ಈಶ್ವರನ ಕೆರೆಗೆ ಭೇಟಿ ನೀಡಿದ ತಹಶೀಲ್ದಾರ್‌  ಎಂ.ಮಂಜುನಾಥ್‌ ಸುದ್ದಿ ಗಾರರ ಜೊತೆ ಮಾತನಾಡಿ, ಸುಮಾರು ಅಡಿಗಳಷ್ಟು ಮಣ್ಣು ತೆಗೆದು, ನಂತರ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ಕಂಡು ಬಂದಿದೆ.

ಈ ಬಗ್ಗೆ ಕೆರೆಯ ಸುತ್ತ ಕಾಲುವೆ ನಿರ್ಮಿಸಿ, ಮರಳು  ತೆಗೆಯದಂತೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರುಜಿಪಂ, ತಾಪಂಗಳಿಂದ ಮರಳು ನೀತಿಯ ಮಾಹಿತಿ ಸಂಗ್ರಹಿಸಿ, ಅದರ ಅನ್ವಯದಂತೆಯೇ ಸ್ಥಳೀಯ ಗ್ರಾಪಂಗಳಿಗೆ ಈ ಕೆರೆ ವ್ಯಾಪ್ತಿ ಒಳಪಟ್ಟಿದ್ದ ಬಗ್ಗೆ ಸಭೆ ನಡೆಸಿ ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೆ ಇದು ನಿರ್ಬಂಧಿತ  ಪ್ರದೇಶವೆಂದು ಬೋರ್ಡ್‌ ಹಾಕಲು ತಿಳಿಸಿದರು.

ಸರ್ವೇ ಮಾಡಿಸಿ ಕೆರೆಯ ಅಂಗಳದ ಸುತ್ತಲೂ ಟ್ರಂಚ್‌ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಹೇಳಿದರು. ನಾಡಕಚೇರಿ ಉಪತಹಶೀಲ್ದಾರ್‌ ಜಗನ್ನಾಥರೆಡ್ಡಿ, ಆರ್‌ಐ ಮುನಿಸ್ವಾಮಿಶೆಟ್ಟಿ, ಟೇಕಲ್‌ ಗ್ರಾಪಂ ಅಧ್ಯಕ್ಷ ಮಂಜುನಾಥ್‌, ಪಿಡಿಒ ಬಾಬುಶೇಷಾದ್ರಿ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು. ಇದಕ್ಕೂ ಮುಂಚೆ ಟೇಕಲ್‌ ನಾಡಕಚೇರಿಗೆ ಭೇಟಿ ನೀಡಿ  ಜನರಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next