Advertisement

Uppinangady ಮರ ಅಕ್ರಮ ಸಾಗಾಟ ಪತ್ತೆ; ಓರ್ವನ ಬಂಧನ

11:56 PM Sep 04, 2023 | Team Udayavani |

ಉಪ್ಪಿನಂಗಡಿ: ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

ಲಾರಿ ಸಹಿತ ಸೊತ್ತು ವಶ
ಲಾರಿಯೊಂದರಲ್ಲಿ ಹೆಬ್ಬಲಸು, ನಂದಿ, ಬಣು³, ಸೇರಿದಂತೆ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖಾಧಿಕಾರಿಗಳು ಸುಬ್ರಹ್ಮಣ್ಯ ಕ್ರಾಸ್‌ ಬಳಿ ತಪಾಸಣೆ ನಡೆಸಿ ಮರಮಟ್ಟುಗಳನ್ನು ಸಾಗಾಟಕ್ಕೆ ಬಳಸಿದ ಲಾರಿಯೊಂದಿಗೆ ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಂಟ್ವಾಳ ತಾಲೂಕು ಪಂಜಿಕರ್‌ ಗ್ರಾಮದ ನಿವಾಸಿ ಜೀವನ್‌ರಾಜ್‌ನನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್‌, ಉಪ ವಲಯ ಅರಣ್ಯಾಧಿಕಾರಿ ರಾವುತ್ತಪ್ಪ ಬಿರಾದಾರ್‌, ರೆಕ್ಯಾ ಉಪ ವಲಯ ಅರಣ್ಯಾಧಿಕಾರಿ ಸಂತೋಷ್‌ ತಡ್ಲಾಗಿ, ರಾಜೇಶ್‌, ಪ್ರತಾಪ್‌, ರವಿ, ಕಿಶೋರ್‌ ಭಾಗವಹಿಸಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next