Advertisement

ಅಕ್ರಮ ಕಲ್ಲು ಗಣಿಗಾರಿಕೆ: ಮಾರುವೇಷದಲ್ಲಿ ತಹಶೀಲ್ದಾರ್‌ ದಾಳಿ

06:41 AM May 02, 2019 | Lakshmi GovindaRaj |

ಶಿವಮೊಗ್ಗ: ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರಿಗೆ ಶಿವಮೊಗ್ಗ ತಹಶೀಲ್ದಾರ್‌ ಮಾರುವೇಷದಲ್ಲಿ ಸ್ಥಳಕ್ಕೆ ತೆರಳಿ ಬಿಸಿ ಮುಟ್ಟಿಸಿದ್ದಾರೆ.

Advertisement

ವೇಷ ಬದಲಿಸಿಕೊಂಡು ಗೆಜ್ಜೆàನಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಮಂಗಳವಾರ ದಾಳಿ ಮಾಡಿದ್ದಾರೆ. ಈ ವೇಳೆ, ಎರಡು ಟ್ರಾÂಕ್ಟರ್‌, ಒಂದು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

ತಹಶೀಲ್ದಾರ್‌ ಅವರು ತಲೆಗೆ ಟವೆಲ್‌ ಸುತ್ತಿಕೊಂಡು, ಟೀ ಶರ್ಟ್‌ ತೊಟ್ಟು, ಸರ್ಕಾರಿ ವಾಹನ ಬಿಟ್ಟು, ಬೈಕ್‌ನಲ್ಲಿ ತೆರಳಿದ್ದರು. ಹಾಗಾಗಿ ಗಣಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಹಶೀಲ್ದಾರ್‌ ಬಂದಿರುವುದೇ ಗೊತ್ತಾಗಲಿಲ್ಲ.

ಸ್ಥಳೀಯರೇ ಯಾರೋ ಬಂದಿದ್ದಾರೆ ಎಂದು ಭಾವಿಸಿದ ಕಾರ್ಮಿಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ತಹಶೀಲ್ದಾರ್‌ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಹೇಳಿದ ನಂತರವೇ ಕೂಲಿ ಕಾರ್ಮಿಕರಿಗೆ ವಿಷಯ ತಿಳಿದಿದೆ. ನಂತರ ತಹಶೀಲ್ದಾರ್‌ ಅಲ್ಲಿದ್ದ ಟ್ರಾಕ್ಟರ್‌, ಜೆಸಿಬಿ ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ.

ಗೆಜ್ಜೆàನಹಳ್ಳಿ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಅದರ ಆಧಾರದ ಮೇಲೆ ಚುನಾವಣೆಗೂ ಮುನ್ನ ದಾಳಿ ಮಾಡಿ, ಗಣಿಗಾರಿಕೆ ಬಂದ್‌ ಮಾಡಿಸಲಾಗಿತ್ತು. ಈಗ ಮತ್ತೆ ಗಣಿಗಾರಿಕೆ ಪುನಾರಂಭವಾಗಿತ್ತು.

Advertisement

ಹೀಗಾಗಿ ನಾಲ್ಕು ಮಂದಿ ವಿಲೇಜ್‌ ಅಕೌಂಟೆಂಟ್‌ಗಳ ಜೊತೆಗೆ ವೇಷ ಬದಲಿಸಿಕೊಂಡು ದಾಳಿ ಮಾಡಲಾಗಿದೆ. ಈ ಕಲ್ಲು ಗಣಿ ನಡೆಸುತ್ತಿರುವವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಇದಕ್ಕೆ ಸೂಕ್ತ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಕೂಡ ನಿಗಾ ವಹಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಹಶೀಲ್ದಾರ್‌ ತಿಳಿಸಿದ್ದಾರೆ.

ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ನಮ್ಮ ವಾಹನವನ್ನು ಹಿಂಬಾಲಿಸುತ್ತಿರುತ್ತಾರೆ ಅನಿಸುತ್ತದೆ. ನಾವು ಅತ್ತ ತೆರಳುತ್ತಿದ್ದಂತೆ ಅವರಿಗೆ ಮಾಹಿತಿ ಲಭ್ಯವಾಗುತ್ತದೆ. ಗಣಿಗಾರಿಕೆ ನಡೆಸುತ್ತಿದ್ದವರು ಪರಾರಿಯಾಗುತ್ತಾರೆ. ಹಾಗಾಗಿ ಈ ಬಾರಿ ನಾವು ವೇಷ ಬದಲಿಸಿಕೊಂಡು ದಾಳಿ ನಡೆಸಿದೆವು.
-ಬಿ.ಎನ್‌. ಗಿರೀಶ್‌, ತಹಶೀಲ್ದಾರ್‌.

Advertisement

Udayavani is now on Telegram. Click here to join our channel and stay updated with the latest news.

Next