Advertisement
ನಗರದ ಹಟ್ಟಿ ರಸ್ತೆಯ ಮಾರ್ಗವಾಗಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಸೌಮ್ಯ ಅವರು ಪರಿಶೀಲನೆ ನಡೆಸಿ, ಟಿಪ್ಪರನ್ನು ಪೊಲೀಸ್ ಠಾಣೆಗೆ ರವಾನಿಸಿದರು. ಕೆಎ 36, ಬಿ6634 ನೋಂದಣಿ ಸಂಖ್ಯೆ ಇರುವ ಟಿಪ್ಪರ್ ಮಾನ್ವಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಸೇರಿದ್ದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Related Articles
Advertisement
ಮಾನ್ವಿ ಕಡೆಯಿಂದ ಮರಳು ತುಂಬಿದ ಟಿಪ್ಪರ್‍ಗಳು ಬರುತ್ತಿವೆ ಎಂದು ಕೆಲವರು ದೂರು ಕೊಟ್ಟಿದ್ದಾರೆ. ಪರಿಶೀಲನೆ ಕೈಗೊಳ್ಳಲು ಜವಳಗೇರಾ ಗ್ರಾಮದ ನೀರಾವರಿ ಇಲಾಖೆ ಬಳಿ ಒಂದು ಚೆಕ್‍ಪೋಸ್ಟ್, ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಒಂದು ಚೆಕ್‍ಪೋಸ್ಟ್ ತೆರೆಯಲಿದ್ದು, ಇದಕ್ಕೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಸಿಸಿ ಕ್ಯಾಮೆರಾ ಅಳವಡಿಸಲಿಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದರು.